ಅಮ್ಮ ಎನ್ನ ಕೂಡ ಆಡುವ ಮಕ್ಕಳು ಅಣಗಿಸುವರು ನೋಡೆ ||ಪ||
ಯಾರು ಪಡೆದನೆಂಬೋರೆ, ಅಮ್ಮಯ್ಯ
ದಾರು ಪಡೆದರೆಂಬೊರೆ
ಕೇರಿಯ ಬೆಣ್ಣೆಯ ಕದ್ದು ತಿಂದವನೆಂದು
ನಾರಿಯರು ದೂರುತಾರೆ ಕೇಳಮ್ಮ ||
ಮಾತೆ ನೀನಲ್ಲವಂತೆ, ಅಮ್ಮಯ್ಯ
ಪಿತನು ಇಲ್ಲಿಲ್ಲವಂತೆ
ಮಾತುಳನ ಬಾಧೆಗೆ ಮಧುರೆಯಿಂದಲಿ ತಂದು
ಖಾತಿಗೆ ಮಾರಿದರಂತೆ ನಿಮಗೆ ||
ದೇವಕಿ ತಾಯಿಯಂತೆ, ಅಮ್ಮಯ್ಯ ವಸು-
ದೇವನು ತಂದೆಯಂತೆ
ಕಾವಜನಕ ನಮ್ಮ ಪುರಂದರ ವಿಠಲನ
ಆವ ಕಾವನೆಂಬೊರೆ ಯಶೋದೆ ||
***
pallavi
amma enna kUDyADuva makkaLu aNagisuvaru nODe
caraNam 1
yAru paDedanembore ammayya dAru haDedarembore
kEriya beNNeya kaddu dindavanendu nAriyaru dUrutAre kELamma
caraNam 2
mAte nInallavante ammayya pitanu illillavante mAtuLana
bAdhege madhureyindali tandu khAdige mAridharante nimage
caraNam 3
dEvaki tAyiyante ammayya vasudEvanu tandeyante kAva
janaka namma purandara viTTalana Ava kAvanembore yashOde
***