Showing posts with label ಸಂತರ ನೆರೆಯಲಿರುವದು ಇಳೆಯೊಳು ಬಲುಪುಣ್ಯ gurumahipati. Show all posts
Showing posts with label ಸಂತರ ನೆರೆಯಲಿರುವದು ಇಳೆಯೊಳು ಬಲುಪುಣ್ಯ gurumahipati. Show all posts

Wednesday, 1 September 2021

ಸಂತರ ನೆರೆಯಲಿರುವದು ಇಳೆಯೊಳು ಬಲುಪುಣ್ಯ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಸಂತರ ನೆರೆಯಲಿರುವದು ಇಳೆಯೊಳು ಬಲುಪುಣ್ಯ ಪ 

ಚಂದನ ಗಾಳಿಯಲನ್ಯಗಿಡ ಬೆಲೆಗಾಣುವಂತೆ | ಕುಂದದೆ ಪಾಮರನಾಗುವನು ಮಾನ್ಯಾ 1 

ಶ್ರವಣ ಮಾಡಲು ಹರಿಕಥೆ ನಿಜಬೋಧವನು | ಭವದುರಿತ ಸೇರುವದು ಅರಣ್ಯಾ 2 

ತಂದೆ ಮಹಿಪತಿಸುತ ಪ್ರಭುವಿನ ಖೂನಾ | ಚಂದದಲಾಗುವದೇ ತಾರ್ಕಣ್ಯಾ 3

***