ಕಾಖಂಡಕಿ ಶ್ರೀ ಕೃಷ್ಣದಾಸರು
ಎಂತು ಮರೆಯಬಹುದು ನಿಮ್ಮ ಹೇಳು ಗುರುರಾಯ | ಅಂತರಂಗದೀ ನೆನೆದು ಪಡೆಯಬೇಕು ಸುಖಾಶ್ರಯಾ ಪ
ತಂದೆ ನೀನೇ ತಾಯಿ ನೀನೇ ಬಂಧು ಬಳಗ ನೀನೇ | ಹೊಂದಿ ಹರುಷಬಡುವಗತಿಯ ಗುರು ದೈವ ನೀನೇ 1
ತಂದು ಜಠರದಲ್ಲಿ ಜನುಮ ಉಣಿಸಿ ಉಡಿಸಿ ಬೆಳೆಸೀ | ಛಂದದಿಂದಲಿ ಹೊರೆವೆಯಿನ್ನು ಬೇಡಿದನು ಸಲಿಸಿ 2
ಮರೆಯಲಿಕ್ಕೆ ದೇಶಗ್ರಾಮ ವೃತ್ತಿಗೃಹಗಳಲ್ಲಾ | ಕಾಯ ಸುಖದ ದ್ರವ್ಯ ಧನವಲ್ಲಾ3
ಮರಹು ಮರಸಿ ಅರವ್ಹಿಲಿರಿಸಿ ಇರಹು ಘನವನರಸಿ | ಗುರು ಮಹಿಪತಿ ಸ್ವಾಮಿ ಕಾಯಿದೇ ಕಂದನುದ್ಧರಿಸಿ4
***