Showing posts with label ಳಳ- RSS- ನವ ಜೀವನದಧ್ಯಾಯವ others NAVA JEEVANADADHYAAYAVA rss. Show all posts
Showing posts with label ಳಳ- RSS- ನವ ಜೀವನದಧ್ಯಾಯವ others NAVA JEEVANADADHYAAYAVA rss. Show all posts

Friday, 24 December 2021

ನವ ಜೀವನದಧ್ಯಾಯವ others NAVA JEEVANADADHYAAYAVA rss


 

RSS song  

ನವಜೀವನದಧ್ಯಾಯವ ಬರೆಯಲು

ಹರಿದೇಳಿರಿ ಜಡತೆಯ ಪೊರೆಯ

ತಾಯ್ನೆಲದಭಿಮಾನದ ದಾವಾಗ್ನಿಗೆ

ದೂಡಿರಿ ಅಪಮಾನದ ಹೊರೆಯ ||ಪ||


ಪರರಾಕ್ರಮಣದ ಕರಿನೆರಳೆರಗಿದೆ ದೇಶದ ಭವಿತವ್ಯದ ಮೇಲೆ

ವಿಧ್ವಂಸದ ಹೆಡೆ ತೆರೆದಾಡುತಲಿದೆ ಗೃಹ ಗುಡಿಗೋಪುರಗಳ ಮೇಲೆ

ಬಲವಿಲ್ಲದವರಿಗೆಲ್ಲಿಯ ಬೆಲೆಯು ಕಾಳ್ಗಿಚ್ಚಾಗಲಿ ಜನ ಹೃದಯ ||೧||


ಕೃತಿ ಕಾಣದ ಒಣ ಭಕ್ತಿಯನಣಗಿಸಿ ವ್ರತಧಾರಿಗಳಾಗಿರಿ ಸುತರೆ

ಹಿಮಗಿರಿ ದ್ವಾರದಿ ಸಾಗರ ತೀರದಿ ನಡೆಯಲಿ ಉರಿಗಣ್ಣಿನ ಪಹರೆ

ನಂದಲು ಬಿಡದಿರಿ ಹಿಂದುಸ್ಥಾನದ ಚಿರಸ್ವಾತಂತ್ರ್ಯದ ಉರಿಯ ||೨||


ನೀತಿಗೆ ಸಂಧಾನದ ಸವಿಮಾತಿಗೆ ಸಂಸ್ಕೃತಿ ಶಾಂತಿಯ ಬೋಧನೆಗೆ

ಚಕ್ರಾಯುಧಧರನಾ ಶ್ರೀಕೃಷ್ಣನ ಸತ್ಪಾತ್ರತೆ ಗಳಿಸುವವರೆಗೆ

ತನುಮನಧನ ಜೀವನದಿಂದೈಯುವ ಭಾರತ ಹಿತದಾರಾಧನೆಯ ||೩||


ನಿಜ ಸೇವಾಭಾವದಿ ಸ್ವೀಕರಿಸುತ ತಾಯ್ನೆಲದುದ್ಧಾರದ ಗುರಿಯ

ಶಿಲೆಗಳ ಸಿಡಿಸುತ ಉಕ್ಕಿನ ಹೃದಯದಿ ಕದಲಿಸಿ ಸಂಕಟಗಳ ಗಿರಿಯ

ಯೌವನದಾವೇಷವ ಒಡಮೂಡಿಸಿ ಮುನ್ನಡೆಯುವ ಬದಲಿಸಿ ವಿಧಿಯ ||೪||

***