ಶ್ರೀ ಆನಂದದಾಸರು ಮೈಸೂರಲ್ಲಿದ್ದಾಗ ರಚಸಿದ ಶ್ರೀ ಲಕ್ಷ್ಮೀದೇವಿಯರ ಸ್ತೋತ್ರ.....
ಕರುಣದಿ ಕಣ್ಣು ತೆರೆಯೇ ।
ಬಾರಮ್ಮಾ ಸಿರಿಯೇ ।। ಪಲ್ಲವಿ ।।
ಧರಣಿಯೊಳಗೆ ಸುಂದರತರ । ಕೊಲ್ಹಾ ।
ಪುರ ಸಿಂಹಾಸನದಿ
ಮೆರೆವ ಧೊರೆಯ ।। ಅ ಪ ।।
ವಿಧಿ ಭವಾದಿಗಳ ಸದನದೊಳಗೆ । ಅ ।
ಭ್ಯುದಯ ಕಟಾಕ್ಷದ
ಸುಧೆಯವಗರೆಯ ।। ಚರಣ ।।
ಸುಂದರಾನನರವಿಂದದ ಮಲ್ಲಿಗೆ ।
ಮಂದಹಾಸ ಮಕರಂದ
ಸುರಿಯೆ ।। ಚರಣ ।।
ಕಡು ಬೆಡಗಿನ ನಿನ್ನಡಿ-
ದಾವರೆಗಳ ।
ಬಿಡದೆ ಭಜಿಪ ವರ ಕೊಡು
ಸುಂದರಿಯೆ ।। ಚರಣ ।।
ಬಡವರಭೀಷ್ಟೆಯ
ಕೊಡುವಳೆಂದು ಬಡ ।
ಬಡಿಸಿ ಬಂದೆ ನೊನ್ನೊಡಲಿನ
ಮೊರೆಯೆ ।। ಚರಣ ।।
ಕೊಟ್ಟರೆ ಕಮಲೇಶ-
ವಿಠ್ಠಲರಾಯನ ।
ಪಟ್ಟದರಸಿಯೆಂಬ
ಕಟ್ಟಳೆ ಬರೆಯೆ ।। ಚರಣ ।।
***
ಕರುಣದಿ ಕಣ್ಣು ತೆರೆಯೆ ಬಾರಮ್ಮ ಸಿರಿಯೆ IIಪII
ಕೊಲ್ಹಾಪುರ ಸಿ೦ಹಾಸನದಿ ಮೆರೆಯುವ ಸಿರೆಯೆ IIಅಪII
ವಿಧಿಭವಾದಿಗಳ ಸದನಗಳಿಗೆ
ಅಭ್ಯು ದಯ ಕಟಾಕ್ಷದಿ ಸುದಯವಸುರಿಸೆ II೧II
ಕಡು ಬೆಡಗಿನ ನಿನ್ನಡಿದಾವರೆಗಳ
ಬಿಡದೆ ಭಜಿಪವರ ಕೋಡು ಸು೦ದರಿಯೆ II೨II
ಸುಂದರಾನ ಅರವಿಂದಮಲ್ಲಿಗೆ
ಮಂದಹಾಸ ಮಕರ೦ದವ ಸುರಿಯೆ II೩II
ಬಡವರಾಭಿ ಷ್ಟೆಯ ಕೋಡುವಳೆ೦ದು
ಬಡಬಡಿಸಿ ಬಂದೆ ನಿನ್ನೊ ಡಲಿನ ಮರಿಯೆ II೪II
ಕೊಟ್ಟರೆ ಕಮಲೇಶವಿಠಲರಾಯನ
ಪಟ್ಟದರಸಿ ಯೋ೦ಬೊ ಕಟ್ಟಲೆ ಕರೆಯೆ II೫II
****