Showing posts with label ಕಂಡೆವಯ್ಯ ಗುರುನಿಮ್ಮ ಶ್ರೀಪಾದ ಸಂದಿಸಿತು ಎನ್ನ ಭೇದಾಭೇದ mahipati. Show all posts
Showing posts with label ಕಂಡೆವಯ್ಯ ಗುರುನಿಮ್ಮ ಶ್ರೀಪಾದ ಸಂದಿಸಿತು ಎನ್ನ ಭೇದಾಭೇದ mahipati. Show all posts

Wednesday, 1 September 2021

ಕಂಡೆವಯ್ಯ ಗುರುನಿಮ್ಮ ಶ್ರೀಪಾದ ಸಂದಿಸಿತು ಎನ್ನ ಭೇದಾಭೇದ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಕಂಡೆವಯ್ಯ ಗುರುನಿಮ್ಮ ಶ್ರೀಪಾದ ಸಂದಿಸಿತು ಎನ್ನ ಭೇದಾಭೇದ ಮಂಡಲದೊಳಾಯಿತಯ್ಯ ಸುಬೋಧ ಕೊಂಡಾಡುವೆ ಕೀರ್ತಿ ಅಖಂಡವಾದ 1 

ಸ್ಮರಿಸುವೆ ನಿಮ್ಮ ಕ್ಷಣ ಕ್ಷಣ ಸ್ಮರಿಸುವೆ ನಿಮ್ಮ ಶ್ರೀಚರಣ ಸ್ಮರಿಸುವೆ ನಿಮ್ಮ ಸಗುಣ ನಿರ್ಗುಣ ಅನುದಿನ 2 

ಸ್ಮರಿಸದೆ ನಿಮ್ಮ ಸ್ವರೂಪ ನಿರ್ವಾಣ ಅರಘಳಿಗಿರಲಾರದೆನ್ನ ಪ್ರಾಣ ಪಥ ನಿಮ್ಮ ವಿನಾ ಮೊರೆ ಹೊಕ್ಕಿದೆ ನಾ ಪರಿಪೂರ್ಣ 3 

ಆವಾವ ಪರಿಯಲಿನಿಮ್ಮ ಕೀರ್ತಿ ದಿವಾರಾತ್ರೆಯಲಿ ಕೇಳುವ ಸುವಾರ್ತಿ ಭಾವಿಸುವೆ ನಿಮ್ಮ ನಿಜಾನಂದ ಮೂರ್ತಿ ಜೀವನ ಮಾಡುವೆÀ ನಾ ಮಂಗಳಾರ್ತಿ 4 

ಬಾಹ್ಯಾಂತ್ರ ನಿಮ್ಮ ಧ್ಯಾನಿಸುವೆ ನಿತ್ಯಾ ಮಹಾಗುರು ನಿಮ್ಮ ಕೃಪೆವಿದು ಸತ್ಯ ಗುಹ್ಯ ಮಹಾವಾಕ್ಯವಾಯಿತು ಪಥ್ಯ ಮಹಿಪತಿ ಆದ ನೋಡಿ ತಾ ಕೃತಕೃತ್ಯ 5

****