...
ಬುದ್ಧಿಮಾನಿಯೆ ಎನ್ನ ಉದ್ಧರಿಸು ತಾಯೆ ಪ
ಶ್ರದ್ಧಾದೇವಿ ನಿನ್ನ ಕೃಪೆಯಾಗೆ ಹರಿ ನಲಿವ ಅ.ಪ.
ಮಧ್ವಮುನಿ ಮನದೈವನತಿ ಮುದ್ದು ಪರಿಸರಳೆ
ವಿದ್ಯಾ ಅಸಾದ್ಯ ಕರುಣಾಬ್ಧಿ ದೇವಿ
ಪ್ರಧ್ವಂಸ ಮಾಡು ಮಮ ಹೃದ್ರೋಗ ಮೂಲ ಪ್ರ
ಬುದ್ಧರಲಿ ಪದವಿತ್ತು ಉದ್ಧಾರ ನೀ ವಹಿಸು 1
ನಿನ್ನ ಕೃಪೆಯಮೃತ ರಸವಿನ್ನು ದೊರೆಯಲು ನಾವು
ಧನ್ಯ ಧನ್ಯರು ಮಾತೆ ಭಕ್ತಿಮೂರ್ತೆ
ಪನ್ನಗ ವಿಧಿ ರುದ್ರಸೇವ್ಯ ಪದ ಪುಷ್ಕರಳೆ
ಪುಣ್ಯ ಪುರುಷ ಸಮೀರ ಸಂತ ಸಂಸ್ತುತೆ ಪಾಹಿ 2
ನೀನೊಲಿಯದ ಜೀವ ಏನು ಸಾಧನೆ ಮಾಡೆ
ಪ್ರಾಣವಿಲ್ಲದ ದೇಹ ಶೃಂಗರಿಸಿದಂತೆ
ವಾನರ ಪ್ರತಿಬಿಂಬ ಜಯೇಶವಿಠಲ
ತಾನೊಲಿಯ ಅವಗೆಂದು ನಿನ್ನವರ ಕರವಶನು 3
***