ಮೂರವತಾರ ಷಟ್ಪದಿ
ಶ್ರೀರಮೇಶ ವಿಧೀರ ವಿಪವೃತ್ರಾರಿ
ಸುರಗಣ ವಿನುತ ಸರ್ವಾಧಾರ
ನಿರುಪಮನೆ ಸ್ವತಂತ್ರಗುಣಾರ್ಣವ ಪ್ರಭುವೇ |
ಸಾರವಾಚದ ಕಾರ ಪತಿ ಓಂಕಾರ
ವ್ಯಾಹೃತಿ ವಾಚ್ಯ ಸರ್ವಪ್ರೇರಕ
ಬಲಸುಭಾಸಕ ಹರಿಯೆ ವಾಗ್ರಸನೆ ನಮಿಪೆ 1
ಆಪ್ತನೆಂದರೆ ಪ್ರಾಣ ಸರಿ ಪರಮಾಪ್ತ
ಹರಿಯ ಯಥಾರ್ಥe್ಞÁನ ಪ್ರಾಪ್ತಿ ಮಾಡಿಸಿ
ವಿಷ್ಣು ಕರುಣವ ಕೊಡಿಸುವನು ತಾನು |
ಆಪ್ತ ನೆನ್ನೆಯಥಾರ್ಥ ಪೇಳುವ ಮತ್ತೆ
ನಿಶ್ಚಯ e್ಞÁನವುಳ್ಳವ ಶಕ್ತ ಕರುಣ
ಪಟುತ್ವಯುತನಿರ್ವಂಚನೆಗಳಿಂದ 2
ಶಿಷ್ಯ ವಾತ್ಸಲ್ಯ ಯುತ ಗುರುಸರಿ
ವಿಶ್ವ ಜನಕನ ಪ್ರಥಮ ಭಕ್ತಶ್ವಾಸಗಿಂತಲು
ಬೇರೆಯವನಿಲ್ಲ ಪವಮಾನನವ |
ದೋಷ ಸಂಶಯ ರಹಿತ ಹರಿ ವಿಶ್ವಾಸ
ಪಾತ್ರ ವಿಶೇಷ ಮಹಿಮಸುರಾಶ್ರಯ
ನಿವನು ವಂಶನೆ ನಿಸುವ ಸೂತ್ರಗಾನಮಿಪೆ 3
ಯಾವ e್ಞÁನ ಬಲ ಸ್ವರೂಪ ಸುದೇವ
ಕ್ರೀಡಾದಿ ಗುಣಯುತ ಭವನಾವಿಕ
ಪ್ರಭು ವಾಯುವಿನಗುಣ ಚರಿತೆ ವೃಂದಗಳ |
ಪಾವನ ಬಳಿತ್ಥಾದಿ ಶೃತಿಗಳು
ಸಾವಧಾನದಿ ಪೊಗಳುವವೊ ಆಭಾವಿ
ಬ್ರಹ್ಮನ ಮೂಲ ರೂಪವುe್ಞÁನ ಬಲಮಯವು 4
ಮೂಲ ರಾಮಾಯಣ ವಿಶೇಷವ
ಪೇಳುವ ಹನುಮನೇ ಪ್ರಥಮ ನಿಹಖೂಳ
ದಿತಿ ಜನ ಸೈನ್ಯ ಮಾರಕ ಭೀಮ ನೆರಡೆನ್ನಿ |
ಶೀಲ ಸಖಗಳ ನೀವ ಶಾಸ್ತ್ರವ
ಪಾಲಿಸಿದ ಗುರು ಮಧ್ವರಾಯರೆ ಮೂಲ
ಮುಖ್ಯ ಪ್ರಾಣ ದೇವನ ಮೂರನೆಯ ರೂಪ 5
ಪ್ರಾಣ ನೀತ್ರಯ ರೂಪಗಳು ಸಮವೆನ್ನುವದು
ಸರ್ವ ವಿಷಯದಿ ಮುಕ್ಕಣ ಪ್ರಮುಖರ
e್ಞÁನ ದಾತೃವಿಗಿನ್ನು ಸಮವುಂಟೆ |
e್ಞÁನ ವಾಚಕ ಹನುಮ ಶಬ್ದವು
ಪೂರ್ಣ ಹರಿ ಸಂದೇಶವೈದನು
ಜಾನಕಿಗೆ ನಿರ್ದೋಷ ವಾಕ್ಯಗಳನ್ನು ಧೀಮಂತ 6
ಪಂಚರಾತ್ರಾಗಮ ಪುರಾಣ ವಿರಂಚಿ
ಜನಕನ ತೋರ್ಪವೇದವು ವಂಚಿಸದ
ಇತಿಹಾಸಗಳು ಕೂಡುತಲಿ ಸಪ್ತಗಳ |
ಮಿಂಚಿಸುತ ಸುe್ಞÁನ ಪಾಪದ
ಸಂಚಯ ತರಿವ ಕಾರಣದಿ ಬಲಿವಂಚಕನ
ಭಕ್ತರು ಕರೆಯುವರು ಸಪ್ತಶಿವ ವೆಂದು7
ಮಾತೆಯಂದದಿ ಹಿತವ ನೀಡುವ
ಶಾಸ್ತ್ರ ವಚನಕೆ ಮಾತೃ ವೆಂಬರು
ಸಪ್ತ್ರ ಶಿವಕರ ಮಾತೃಗಳ ಧರಿಸಿಪ್ಪ ನಿವನೆಂದು |
ಖ್ಯಾತನಾಗಿಹ ಭೀಮ ನಾಮದಿ ತೀರ್ಥವೆನ್ನಲು
ಶಾಸ್ತ್ರವಿದಿತವು ಮತ್ತೆ ಮಧುವೆನೆ
ಸುಖವು ಮುಕ್ತಿಯನೀವ ಶಾಸ್ತ್ರವನು 8
ಇತ್ತ ದೇವನೆ ಮಧ್ವನೆಂಬರು
ಸುತ್ತುತೀತ್ರಯ ನಾಮದರ್ಥವ ನಿತ್ಯ
ತಿಳಿಯುತ ಪಠಿಸಿ ಪಾಡಲುವಾಯು ದೇವನನು |
ಭಕ್ತ ಬಾಂಧವನಾತ ವಲಿಯುತ ತತ್ವವೇತ್ತನ
ಮಾಳ್ವ ನಿಶ್ಚಯ ಭೃತ್ಯನಾನೆಂತೆಂದು
ಮಧ್ವರ ಸಾರಿ ಭಜಿಸುತಿರಿ9
ಮೂಢ ಭಕ್ತಿ ಇದಲ್ಲ ಗುರುವೆಡೆ
ಈಡು ಕಾಣೆನು ಜೀವ ಕೋಟಿಲಿ
ಪ್ರೌಢ ಮಧ್ವಗೆ ಪೂರ್ಣ ಪ್ರಜ್ಞನೆ ಈತ ಶ್ರುತಿ ಸಿದ್ದ |
ಬೀಡು ಮಾಡಿಹ ವಿದ್ಯೆ ನೂಕುತ
ತೊಂಡ ನೆಂದಿವರಡಿಗೆ ಬೀಳಲು
ಪಾಂಡುರಂಗನ ಬಿಚ್ಚಿ ತೋರುವ ಗೋ ಸಮುದ್ರದಲಿ10
ಏನ ಪೇಳಲಿ ಏನಪೇಳಲಿ
e್ಞÁನನಿಧಿ ಸರ್ವಜ್ಞ ಗುರುವರ
ತಾನು ಗೈದ ಮಹೋಪಕಾರವ ಮುಕ್ತಿಯೋಗ್ಯರಿಗೆ |
e್ಞÁನ ಬಾಹುದೆ ಬಿಟ್ಟರೀತನ
ಶೂನ್ಯವೆ ಸರಿ ಎಲ್ಲ ಆತಗೆ ಮನ್ನಿಸುವನೆ
ಅನನ್ಯವನು ಹರಿ ಶರಣು ಆಚಾರ್ಯ 11
ಈತನೇ ಆನಂದ ತೀರ್ಥನು
ಈತನೇ ಆಚಾರ್ಯ ನಿಶ್ಚಯ
ಈತನೇ ಸರಿಮಾತರಿಶ್ವನು ವಾಯುವಿನರೂಪ |
ಈತ ಚರಿಸುವ ಶಾಸ್ತ್ರವ್ಯೂಹದಿ
ದೈತ್ಯರಿಂದಾಚ್ಛಾದಿತ ಗುಣಯುತ
ಆತ್ಮಪೂರ್ಣಾನಂದ ದೇವನ ಶಾಸ್ತ್ರಮಥಿಸುತಲಿ 12
ಬಿಚ್ಚಿತೋರುವ ಸಾರ ವೃಂದಕ್ಕೆ
ಚುಚ್ಚುವನು ದುರ್ವಾದಿ ಮತಗಳ
ಕೆಚ್ಚೆದೆಯವನು ಗರ್ಜಿಸುತವೇದೋಕ್ತವಾಕ್ಯಗಳ |
ಹೆಚ್ಚು ಹೆಚ್ಚೇ ಸರಿಯು ವಿಷ್ಣುವು
ಸ್ವಚ್ಛ ಪೂರ್ಣಾನಂದ ಸುಖಮಯ
ಪೃಚ್ಛ ಪರಿವಾರ ಸರಿ ವಿಧ್ಯಾದಿಗಳು ಹರಿಗೆಂದು 13
ಕಚ್ಚಿಲತೆಗಳ ಬಿಸುಡುವಂದದಿ
ನುಚ್ಚು ಮಾಡುವ ಪ್ರಶ್ನೆನೀಕವ
ಅಚ್ಚನಾರಾಯಣನೆ ಪ್ರೇರಕ ನಿವಗೆ ಜನಕನಿಹ |
ಮೆಚ್ಚು ಮಗ ಶ್ರೀ ಲಕ್ಷೀ ದೇವಿಗೆ
ರಚ್ಚೆತನುವನು ಕಿತ್ತುವೋಡಿಸಿ
ಹೆಚ್ಚಿಸುವ ಸುe್ಞÁನ ದೀಪವ ಹರಿಯ ಪ್ರಧಮಾಂಗ14
ಕೊಟ್ಟು ಉಂಗುರ ಸುಟ್ಟುಲಂಕೆಯ
ಬಿಟ್ಟು ಕಾಮವ ಮೆಟ್ಟಿಖಳರನು
ಜಟ್ಟಿ ಹನುಮನು ಪಟ್ಟ ಪುತ್ರನ ಪದವಿ ಸಾಧಿಸಿದ |
ಹುಟ್ಟಿ ಕುಂತಿಲಿ ಕುಟ್ಟಿ ಕುರುಕುಲ
ಇಟ್ಟು ಮನದಲಿ ದಿಟ್ಟ ಕೃಷ್ಣನ
ಅಟ್ಟಿ ಹಾಸದಿ ಮೆರೆದ ಭೀಮನು e್ಞÁನ ಭಾಸ್ಕರನು15
ಹುಟ್ಟು ಸಾವಿನ ಕಟ್ಟು ಬಿಡಿಸಲು
ಘಟ್ಟ ದಡಿಯಲಿ ಭಟ್ಟನೆನಿಸುತ
ತೊಟ್ಟು ಕಾವಿಯ ಬಟ್ಟೆ ತವಕದಿ ಭ್ರಷ್ಟದಸ್ಯುಗಳ |
ಕೆಟ್ಟ ಮತಗಳ ಸುಟ್ಟು ವಾದದಿ
ಕೊಟ್ಟು ಸುಜನಕೆ ಸೂತ್ರ ಭಾಷ್ಯವ
ನೆಟ್ಟ ಸಂತರ ಮನದಿ ವಿಷ್ಣುವ ಶ್ರೇಷ್ಠಗುರುಮಧ್ವ16
ಏಕೆ ಭಯ ನಮಗಿನ್ನು ನಿರಯದ
ಏಕೆ ಸಂಶಯ ಮುಕ್ತಿ ವಿಷಯದಿ
ಏಕೆ ಕಳವಳ ಮಧ್ವರಾಯರ ಶಾಸ್ತ್ರ ಪೀಯೂಷ |
ಜೋಕೆಯಿಂ ಪ್ರತಿದಿನವು ಸೇವಿಸೆ
ಶ್ರೀಕಳತ್ರನು ಕೈಯ ಬಿಡುವನೆ
ನಾಕಪತಿಯಿಂಬಿಟ್ಟು ಸಲಹುವ ಶಾಸ್ತ್ರಸಿದ್ಧವಿದು 17
ಹೆಚ್ಚು ಮಾತೇಕಿನ್ನು ಹರಿಮನ
ಮೆಚ್ಚುಯೆನಿಸಿಹ ಮಧ್ವರಾಯರು
ಬಿಚ್ಚಿತೋರಿದ ತೆರದಿ ಶೃತಿಗಳ ಭಜಿಸಿಖಳ ಜನಕೆ |
ಬಚ್ಚಿಡುತ ವಿe್ಞÁನ ಮರ್ಮವ
ನುಚ್ಚು ನೂಕುತ ದುರ್ಮತಕಿಡಿರಿ
ಕಿಚ್ಚು ಕಮಲೇಶ ನೊಲಿಮೆಗೆ ಬೇರೊಂದು ಪಥವಿಲ್ಲ 18
ನಮ್ಮಹಿರಿಯರ ಖಿನ್ನನುಡಿಗಳ
ನೊಮ್ಮನದಿ ನೀವೆಲ್ಲ ಕೇಳಿರಿ
ರಮ್ಮೆಯರಸಗೆ ಸಮ್ಮತದ ಸಚ್ಛಾಸ್ತ್ರದರ್ಪಣವ |
ಹೆಮ್ಮೆಯಿಂದಲಿ ಕೊಟ್ಟು ಬಂದೆವು
ಒಮ್ಮೆಯಾದರು ನೋಡುವರೆ ಈ
ನಮ್ಮ ಸಂತತಿ ಹಾ ಹರಿ ಹರೀಯೆಂಬ ಕ್ರಾಂತಿಯುತ19
ಉಣ್ಣಿರುಣ್ಣಿರಿ ಮಧ್ವಕಂದರೆ
ಉಣ್ಣುತಲಿ ಭವ ಹುಣ್ಣುವಳಿಯಿರಿ
ಅಣ್ಣ ಪ್ರಾಣನದಯವ ಯಾಚಿಸಿಘನ್ನ ಶಾಸ್ತ್ರಾನ್ನ |
ಅನ್ನ ಶೃತಿಗಳು ವಿವಿಧ ಸ್ಮøತಿಪ
ಕ್ವಾನ್ನ ಪಾಯಸ ಗೀತೆ ಭಕ್ಷ್ಯಗಳೆನ್ನಿ
ಬಗೆ ಬಗೆ ಸರ್ವ ಮೂಲವ ಸೂತ್ರಗಳೆ ಸಾರು 20
ತುಪ್ಪವೆನ್ನಿರಿ ನ್ಯಾಯ ಸುಧೆಯನು
ಗೊಪ್ಪರಾಜರ ಗ್ರಂಥ ಹಲ್ಪವು
ಅಪ್ಪರಾಯರ ವಾಣಿ ಕ್ಷೀರವು ದಾಸ ಸಾಹಿತ್ಯ |
ತಪ್ಪದೆಲೆ ತಿಂಬಂಥ ತಿಂಡಿಯು
ಚಪ್ಪರಿಸಿ ಭಾರತದ ಕೂಟನು
ವಪ್ಪುವನು ಶ್ರೀ ಕೃಷ್ಣ ದೇವನು ಭಕ್ತ ನುಣ್ಣಲಿವ 21
ಎಂತು ಪೊಗಳಲಿ ನಿಮ್ಮ ಗುರುವರ
ಹಂತ ಸುರಗಣ ವೆಲ್ಲ ನಿಮ್ಮಡಿ
ನಿಂತು ಪಡೆದರು e್ಞÁನ ಪ್ರಾತರ್ನಾಮಕನೆಶರಣು |
ಕಂತೆ ಮತಗಳ ನಾಶಗೈದನ
ನಂತ ಮಹಿಮನೆ ದೀನ ನಾನಿಹೆ
ಕುಂತಿ ನಂದನ ನೀನೆ ತಿಳಸೈ ಸಕಲ ಶಾಸ್ತ್ರಾರ್ಥ 22
ಮೂರ್ತಳೆನಿಸುವ ಚಂದ್ರಮಾನಿನಿನಾಥ
ಪ್ರಾಣನೆ ಸೂರ್ಯ ನೊಳ್ ಆದಿತ್ಯ
ನಾಮದಿ ನಿಂತು ದಿಕ್ಪತಿಗಳಿಗೆ ಶಕ್ತಿಗಳ |
ಇತ್ತು ಸೃಷ್ಠಿಯ ಕಾರ್ಯ ವೆಸಗುವೆ
ಉತ್ತರಾಯಣ ಪಗಲು ಮಾನಿಯೆ-
ನಿತ್ಯ ಪ್ರೇರಿತ ನೀಪ್ರಜಾಪತಿನಾಮ ಹರಿಯಿಂದ 23
ಖ್ಯಾತ ಮೂರ್ತಾ ಮೂರ್ತ ಧಾರಕೆ
ತತ್ವಪತಿಗಳ ಪೋಷತನುವಲಿ
ಮೃತ್ಯುಹಾಗಶನಾಪಿಪಾಸಾಪಾನ ನಾಮಗಳ |
ಎತ್ತಿ ನಡಿಸುವೆ ದೇಹ ಕಾರ್ಯವ್ರಾತ
ಬಿಡಲೇನೊಂದು ನಡೆಯದು
ಮಾತರಿಶ್ವನೆ ನಿಧಿಗು ಆರ್ಯುರ್ದಾತ ನೆನಿಸಿರ್ಪೆ 24
ಅನ್ನ ವಿಧಿಯಿಂ ಕೊಂಬೆ ಸಮಸರಿ
ಯನ್ನ ಬ್ರಹ್ಮಗೆ ಜೀವ ಗಣತಾವುಣ್ಣಲಾರರು
ನಿನ್ನ ಬಿಡೆ ಪ್ರಾಣದಿ ಪಂಚಕನೆ |
ಸ್ವಪ್ನ ನಿದ್ರಾ ಸಮಯದೊಳ್ ಹರಿಯನ್ನು
ಕೂಡಿರೆ ಕರಣಪರು ಘನಯಜ್ಞ
ನಡಿಸಿ ಸರ್ಮರ್ಪಿಸುವೆ ನೀನೊಬ್ಬ ದೇವನಿಗೆ 25
ನಿನ್ನ ನಂಬಿದ ಭಕ್ತನಿಗೆ ಭವ
ಹುಣ್ಣು ಮುಟ್ಟದು ವಿಷ್ಣು ವಲಿಯುತ
ಮನ್ನಿಸುವ ಹರಿಯಾಜ್ಞೆಯಿಂಮುಕ್ತಿದನು ನೀ ಹೌದು |
ಘನ್ನ ಬಾಧ್ವನೆ ವಿಶ್ವ ವಂಶನೆ
ನಿನ್ನ ಮಹಿಮೆಯಗಣ್ಯ ಸಿದ್ಧವು
ನಿನ್ನ ಧೊರೆ ಹರಿ ಒಬ್ಬ ಜೀವೋತ್ತುಮನೆ ಅಶರೀರ26
e್ಞÁನ ಬಲ ಐಶ್ವರ್ಯಗಳು ಪರಿಪೂರ್ಣ
ಸರಿ ವೈರಾಗ್ಯ ಹಾಗೆಯೆ ಪ್ರಾಣನಿನ್ನಲಿ
ಕರಿಸುವೆಯೊ ಆಧ್ಯರ್ಧ ನಾಮದಲಿ |
ಮಾನ್ಯ ವಿಷ್ಣುಸಹಾಯ ನಿನಗೈನ್ಯೂನ
ವಿಲ್ಲವು ಯಾವ ತೆರದಲುಕಾಣೆ
ಅಪಜಯ ಜೀವ ಸಾಧನೆಯೆಲ್ಲ ನಿನ್ನಿಂದ 27
ಶೇಷಗಸದಳ ನಿನ್ನ ಪೊಗಳಲು
ಶೇಷ ಸರಿ ಬಡದಾಸನಹೆ ವಿಶ್ವಾಸದಿಂ
ಸಂವತ್ಸರನೆ ನೀಕಾಯಬೇಕೆಂಬೆ |
ಏಸು ಜನ್ಮಗಳನ್ನು ಕೊಟ್ಟರು
ಶ್ವಾಸ ಪತಿತವ ಮತದಿ ಪುಟ್ಟಿಸಿ
ದಾಸ ಭಾಗ್ಯವ ನೀಡು ಹರಿಯೊಳ್ ಶುದ್ಧ ಭಕ್ತಿಯುತ28
ಎರಡು ಸಹ ಮೂವತ್ತು ಲಕ್ಷಣ
ವಿರುತಿಹ ಜಗದ್ಗುರುವೆ ವಿಷ್ಣುವಿಗೆರಡು
ಬಗೆವರ ಮುರಿದು ಶೃತಿಗಳಸಾರ ವೇನೆನ್ನ
ಎರಡು ಸರಿಯೆಂತೆಂದು ಸ್ಥಾಪಿಸಿ
ಎರಡು ವಿದ್ಯೆಗಳಿರವು ತೊರುವ
ಲೆರಡು ಸುಖಗಳ ಪಡೆಯೆಸಾಧನ ಮಾರ್ಗ ನೀಡ್ವೆಬತ 29
ಸರ್ವ ಶಕ್ತನೆ ಶರ್ವ ವಿನುತನೆ
ಸರ್ವ ಸರ್ವಗ ಹಿರಿಯ ತನಯನೆ
ಸರ್ವ ಜಗದಾಧಾರ ಪೋಷಕ ಸರ್ವ ತೋವರನೆ |
ಸರ್ವ ಕಾಲದಿ ಸರ್ವ ದೇಶದಿ
ಸರ್ವ ಗುಣದಿಂ ಹರಿಯ ಯಜಿಸುವ
ಸರ್ವ ಸದ್ಗುಣ ಪೂರ್ಣ ದೋಷವಿದೂರ ಸರ್ವಜ್ಞ 30
ಹಿಂದೆ ಪೂರ್ವಜರೆಲ್ಲ ಕೂಡುತಲೊಂದು
ಪಾಯವಗೈದು ಮೃತ್ಯುವತಂದು
ವಡ್ಡಲ್ ದಿವಿಜ ವೃಂದಕೆ ಕುಂದು ವದಗಿಸಲು |
ಕಂದುತಳಿಯಲ್ ನಿಖಿಲ ಸುರಗಣ
ಕುಂದು ಮೃತ್ಯುವ ಗೈದು ಪುಡಿಪುಡಿ
ವಂದನಾರ್ಹನು ಒಬ್ಬನೀನೇ ಯೆಂದು ಸ್ಥಾಪಿಸಿದೆ 31
ಪಾಹಿ ಅಮ ಶುಚಿ ಯೊಗ ಕ್ಷೇಮನೆ
ಪಾಹಿ ಅಮರಲಲಾಮ ಅನಿಲನೆ
ಪಾಹಿ ಹರಿಯಾ ಭಾಸಕನೆನಿರಪೇಕ್ಷ ನಿರವದ್ಯ |
ಪಾಹಿ ಸತ್ಯ ವಿಶುದ್ಧ ಸತ್ವನೆ
ಪಾಹಿ ಲಕ್ಷ್ಮೀ ಪುತ್ರ ಭೃತ್ಯನೆ
ಪಾಹಿ ಜೀವಗ ಬಾದರಾಯಣಪ್ರೀಯ ಮಹರಾಯ 32
ಪಾಹಿ ಹನುಮನೆ ಭೀಮ ಮಧ್ವನೆ
ಪಾಹಿ ದುರ್ಮತ ಧ್ವಾಂತ ಸೂರ್ಯನೆ
ಪಾಹಿ ನತಜನ ಪಾಲ ಪ್ರಾಣನೆ ಪಾಹಿ ಶ್ರೀಸುತನೆ |
ಪಾಹಿ ಜಗದಾಧಾರ ಸೂತ್ರನೆ
ಪಾಹಿ ಸಾಮನೆವಂಶ ದೂರನೆ
ಪಾಹಿ ಹರಿಯಚ್ಛಿನ್ನ ಭಕ್ತನೆ ಪಾಹಿ ವಿe್ಞÁನ 33
ಪಾಹಿ ಋಜುಪತಿ ವಾಯುಕೂರ್ಮನೆ
ಪಾಹಿ ಜೀವ ಲಲಾಮ ಗುಣನಿಧಿ
ಪಾಹಿ ಶುಚಿ ಸರ್ವಜ್ಞ ಸಾಮಗಭಾವಿ ಶತಮೋದ |
ಪಾಹಿ ಸತ್ಯನೆ ಕಲಿವಿದಾರಣ
ಪಾಹಿ ಗುರು ಗೋವತ್ಸ ರೂಪಿಯೆ
ಪಾಹಿ ಮಿಷ್ಣು ಪದಾಬ್ಜಮಧುಕರ ಭಾರತೀ ಕಾಂತ 34
ಪಾಹಿ ಅಮೃತನೆ ವಿಶ್ವರಜ್ಜುವೆ
ಪಾಹಿ ಬೃಹತೀ ಛಂದ ಮಾನಿಯೆ
ಪಾಹಿ ಹಂಸೋಪಾಸಕ ಪ್ರಭು ಆಖಣಾಶ್ಮಸಮ |
ಪಾಹಿ ಸಾಯಂಖ್ಯಾತ ಜೀವಗ
ಪಾಹಿ ಜಗಚೇಷ್ಠಾ ಪ್ರವರ್ತಕ
ಪಾಹಿ ಅನಿಲನೆ ಶೇಷವಿಪಶಿವ ವಂದಿತಾಂಘ್ರಿಯುಗ 35
ಪಾಹಿ ಪರಿಸರ ಪಂಚ ಕೋಶಗ
ಪಾಹಿ ಗುಣನಿಧಿ ಕೊವಿದೋತ್ತಮ
ಪಾಹಿ ನಮಿಸುವೆ ಅಣುಮಹದ್ಘನ ರೂಪ ವಿಖ್ಯಾತ |
ಪಾಹಿ ವಿಶ್ವಗ ವ್ಯಸನ ವರ್ಜಿತ
ಪಾಹಿ ಹರಿಯನು ನಿತ್ಯನೋಳ್ಪನೆ
ಪಾಹಿ ವಿಷ್ಣುದ್ವಾರ ಶರಣೈ ಪಾಹಿ ಹರಿ ಸಚಿವ 36
ಜಯ ಜಯವು ಶ್ರೀ ಹನುಮ ಭೀಮಗೆ
ಜಯ ಜಯವು ಶ್ರೀ ಮಧ್ವರಾಯಗೆ
ಜಯ ಜಯವು ತತ್ವೇಶರರಸಗೆ ಮುಖ್ಯಪ್ರಾಣನಿಗೆ |
ಜಯ ಜಯವು ಜಯತೀರ್ಥ ಹೃಸ್ಥಗೆ
****