..
ಇಂದ್ರರೊ ದೇವೇಂದ್ರರೊಚಂದ್ರನಂತೆ ಹೊಳೆಯುತ ಬಂದರೈವರು ಪ.
ರಾಮ ಪಾಂಡವರಿಗೆ ಕ್ಷೇಮಾಲಿಂಗನಕೊಟ್ಟುಪ್ರೇಮದಿ ಕೈಯ ಹಿಡಿದನುಪ್ರೇಮದಿ ಕೈ ಹಿಡಿದು ಮಾತಾಡಿದಸ್ವಾಮಿ ಸನ್ನಿಧಿಗೆ ಬರಬೇಕು 1
ನೊಸಲಲ್ಲೆ ಕಸ್ತೂರಿ ಎಸೆವುತ ಸಂಪಿಗೆಕುಸುಮದ ಮಾಲೆ ಅಲವುತ ಕುಸುಮದ ಮಾಲೆ ಅಲವುತ ಪ್ರದ್ಯುಮ್ನವಸುಧಿಪಾಲಕರ ಕರೆದನು2
ದುಂಡು ಮುತ್ತುಗಳಿಟ್ಟು ಪೆಂಡೆ ಸರ ಹಾಕಿಪುಂಡರೀಕಾಕ್ಷ ಕುಳಿತಿದ್ದಪುಂಡರೀಕಾಕ್ಷ ಕುಳಿತಿದ್ದ ಚರಣಕ್ಕೆಪಾಂಡವರು ಬಂದು ಎರಗಿದರು3
ರನ್ನ ಮಾಣಿಕ ಬಿಗಿದ ಹೊನ್ನ ಮಂಚದ ಮೇಲೆ ಪನ್ನಂಗಶಯನ ಕುಳಿತಿದ್ದಪನ್ನಂಗಶಯನ ಕುಳಿತಿದ್ದ ಚರಣಕ್ಕೆಸುಭದ್ರೆ ಬಂದು ಎರಗಿದಳು 4
ಮಿಂಚಿನಂತೆ ಹೊಳೆಯುತ ಪಂಚಬಾಣನಪಿತ ಮಂಚದ ಮೇಲೆ ಕುಳಿತಿದ್ದಮಂಚದ ಮೇಲೆ ಕುಳಿತಿದ್ದ ಚರಣಕ್ಕೆಪಾಂಚಾಲೆ ಬಂದು ಎರಗಿದಳು5
ಸೂಸು ಮಲ್ಲಿಗೆ ಹೂವ ಹಾಸಿದ ಮಂಚದಿವಾಸುಕಿಶಯನ ಕುಳಿತಿದ್ದವಾಸುಕಿಶಯನ ಕುಳಿತಿದ್ದ ಚರಣಕ್ಕೆಆಶೇಷ ಜನರೆಲ್ಲ ಎರಗಿದರು6
ಸ್ವಾಮಿ ರಾಮೇಶನು ಕ್ಷೇಮ ಕುಶಲವ ಕೇಳಿಬ್ರಾಹ್ಮಣರ ದಯವು ನಿಮಗುಂಟು ಬ್ರಾಹ್ಮಣರ ದಯವು ನಿಮಗುಂಟು ಎನುತಲೆಸ್ವಾಮಿ ಶ್ರೀಕೃಷ್ಣ ನುಡಿದನು7
****