ಕಾಖಂಡಕಿ ಶ್ರೀ ಕೃಷ್ಣದಾಸರು
ಚಿನ್ಮನೆಂದುಪೇಕ್ಷಿಸದೇ ದತ್ತಾತ್ರೇಯಾ ಪ
ಸರಸಿರುಹ ಸಖ ಶತಕೋಟಿ ತೇಜಾ ಪರಭಕ್ತ ಜನ ಸುರ ಭೂಜಾ ಕರುಣಾ ಸಾಗರ ಅತ್ರಿ ತನುಜಾ ಮೊರೆ ಹೊಕ್ಕವರ ರಾಜಾಧೀರಾಜಾ 1
ಪತಿತ ಜನರ ಮಾಡುತಿಹೆ ಉದ್ಧಾರಾ ಚತುರ್ದಶ ಭುವನಾಧಾರ ಅತಿಕೀರ್ತಿ ಸು ಶೋಭಿತ ದಿಗಂಬರಾ ನುತಗುಣ ಮಂಡಿತ ಮುನಿ ಮನೋಹರಾ 2
ಪರಮ ಪುರುಷ ಸದ್ಗುರು ಸಿರಿಲೋಲಾ ಸರಸಿಜ ನೇತ್ರ ದಯಾಳಾ ಧರಿಯೊಳನೇಕ ರೂಪವ ದೋರ್ಪೆ ಘನಲೀಲಾ ಗುರುವರ ಮಹಿಪತಿ ನಂದನ ಪಾಲಾ3
****