Showing posts with label ಪೋಷಿಸೆನ್ನ ಜೀಯ ಶ್ರೀ ವರದೇಶ ದಾಸರಾಯ abhinava pranesha vittala ವರದೇಶ ದಾಸ stutih. Show all posts
Showing posts with label ಪೋಷಿಸೆನ್ನ ಜೀಯ ಶ್ರೀ ವರದೇಶ ದಾಸರಾಯ abhinava pranesha vittala ವರದೇಶ ದಾಸ stutih. Show all posts

Thursday, 26 December 2019

ಪೋಷಿಸೆನ್ನ ಜೀಯ ಶ್ರೀ ವರದೇಶ ದಾಸರಾಯ ankita abhinava pranesha vittala ವರದೇಶ ದಾಸ stutih

.

ಪೋಷಿಸೆನ್ನ ಜೀಯ| ಶ್ರೀ ವರದೇಶ ದಾಸರಾಯ ||ಪ||       

ನೇಸರಕುಲಪತಿ ದಾಶರಥಿಯ ಪದ ಸೋಸಿಲಿ ಭಜಿಸಿದ ಭೂಸುರ ಪ್ರಿಯನೆ ||ಅ.ಪ||      


ದಾಸಕುಲಾನ್ವಯನೇ ಗುರು ಪ್ರಾಣೇಶ ಪದಾಶ್ರಯನೇ | ಕಾಸುಭೂಮಿ ವನಿತಾಶೆಯ ತೊರೆಯುತ ಮಾಸತಿಪತಿ ಪದ ಪೊಂದಿದ ಪ್ರಭುವರ ||೧||    


ಮೂಢತನದಿ ನಾನು ಸಂತತ ಕೇಡು ಕಾರ್ಯಗಳನು | ಮಾಡಿದೆ ಬಹು ವಿಧ ರೂಢಿಗೊಡೆಯ ಶ್ರೀ ಕ್ರೋಢನ ಭಜಿಸದೆ ಖೋಡಿಯಾಗಿರುವೆ ||೨||      


ಏನುಪೇಳಲಿನ್ನು ಎನ್ನಯ ಹಾನಿಯ ಪರಿಯನ್ನು| ಮಾನದ ಅಭಿನವ ಪ್ರಾಣೇಶ ವಿಟ್ಠಲನ | ಪ್ರಾಣ ಪ್ರಿಯ ಜವ ಪೋಣಿಸು ಸನ್ಮತಿ ||೩||

***