Showing posts with label ಭಾವನೆ ಬಲಿದನಕಾ ಒಣಭಕ್ತಿಯ ಮಾಡಿದರೇನು gurumahipati. Show all posts
Showing posts with label ಭಾವನೆ ಬಲಿದನಕಾ ಒಣಭಕ್ತಿಯ ಮಾಡಿದರೇನು gurumahipati. Show all posts

Wednesday, 1 September 2021

ಭಾವನೆ ಬಲಿದನಕಾ ಒಣಭಕ್ತಿಯ ಮಾಡಿದರೇನು ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು

ಭಾವನೆ ಬಲಿದನಕಾ ಒಣಭಕ್ತಿಯ ಮಾಡಿದರೇನು | ದೇವದೇವೋತ್ತಮನಾಪಾದ ಸುಮ್ಮನೆ ಸಿಲ್ಕುವದೇನು ಪ 

ಸಂಜಿವನಿಲ್ಲದಲೇ ಸಾವಿರ ಗಿಡ ಮೂಲಿಕಿದ್ದೇನು | ರಂಜಕ ತಾನಿಡದೇ ಯಂತ್ರದಿಗುರಿವಡ್ಡಿರಲೇನು 1 

ಸೂರಿಯನುದಯಿಸದೇ ಕನ್ನಡಿ ಕಣ್ಣುಗಳಿದ್ದೇನು | ಗುರುರಾಯನ ಕರುಣಾ ಪಡಿಯದೆ ಮಂತ್ರ ಕಲಿತೇನು 2 

ಅನುಭವಿಸದೇ ಸುಖವಾ ಜ್ಞಾನದ ಮಾತಾಡಿದರೇನು | ಘನಗುರು ಮಹಿಪತಿ ಸ್ವಾಮಿಯ ನೆನಯದೆ ಜನುಮವೇನು 3

***