Showing posts with label ರಮಾಸಮುದ್ರನ ಕುಮಾರಿ ನಿನ್ನ ಸರಿ shesha vittala. Show all posts
Showing posts with label ರಮಾಸಮುದ್ರನ ಕುಮಾರಿ ನಿನ್ನ ಸರಿ shesha vittala. Show all posts

Friday, 27 December 2019

ರಮಾಸಮುದ್ರನ ಕುಮಾರಿ ನಿನ್ನ ಸರಿ ಸಮಾನರ್ಯಾರಮ್ಮ ankita shesha vittala RAMAA SAMUDRANA KUMAARI NINNA SARI SAMAANARYAARAMMA


kruti by bagepalli shesha dasaru ಬಾಗೇಪಲ್ಲಿ ಶೇಷದಾಸರು

by shesha vittala dasaru bagepalli  ೧೭೨೦ - ೧೭೯೬


ರಮಾಸಮುದ್ರನ ಕುಮಾರಿ ನಿನ್ನಸರಿ

ಸಮಾನರ್ಯಾರಮ್ಮ ಪ


ಉಮೇಶ ಮೊದಲಾದ ಅಮರ ನಿಕರವು

ಭ್ರಮಿಸಿ ನಿನ್ನ ಪಾದ ಕಮಲ ಭಜಿಪುದು ಅ.ಪ


ಕರುಣಾವಾರಿಧಿಯೆಂದು ಶರಣ ಜನರು ನಿನ್ನ

ಸ್ಮರಣೆ ಮಾಡುತ ಲಿಪ್ಪರೆ

ಹರಿಣಾಕ್ಷಿ ಕೇಳ್ನಿನ್ನ ಕರುಣಾದಿಂದಲಿ ಅಘ

ಹರಣ ಮಾಡಿ ನಿನ್ನ ಚರಣಾವ ತೋರಿಸಮ್ಮ 1


ಅಪಾರ ಮಹಿಮನ ವ್ಯಾಪಾರಗಳ ತಿಳಿದು

ಕಾಪಾಡುವೇ ಜಗವಾ

ಕೋಪರಹಿತಳಾಗಿ ಶ್ರೀಪತಿಯೊಳು ಎಮ್ಮ

ತಾಪತ್ರಯವ ಪೇಳಿ ಕಾಪಾಡಬೇಕಮ್ಮ 2


ವಾಸವ ವಂದಿತ ಸಿರಿಶೇಷವಿಠ್ಠಲನೊಳು

ವಾಸವ ಮಾಡುವಳೆ

ಘಾಸೀ ಮಾಡದೆ ಎನ್ನ ಈ ಸಮಯದೊಳು

ವಾಸುದೇವಗೆ ಪೇಳಿ ಪೋಷಿಸಬೇಕಮ್ಮ 3

***

ರಾಗ : ಶುದ್ಧ  ಸವೇರಿ (raga tala may differ in audio)


ರಮಾಸಮುದ್ರನ ಕುಮಾರಿ ನಿನ್ನ ಸರಿ
ಸಮಾನಯಾ೯ರಮ್ಮ ಪ
ಉಮೇಶ ಮೊದಲಾದ ಅಮರನಿಕರವು
ಭ್ರಮಿಸಿ ನಿನ್ನ ಪಾದಕಮಲ ಪೂಜಿಪರಮ್ಮ IIಅಪII

ಅಪಾರ ಮಹಿಮನ ವ್ಯಾಪಾರ೦ಗಳ
ತಿಳಿದು ಕಾಪಾಡುವೆ ಜಗವ
ಕೋಪಾರಹಿತಲಾಗಿ ಶ್ರೀಪತಿಯೂಳು ಎಮ್ಮ
ತಾಪತ್ರಯವ ಪೇಳಿ ಪೂಶಿಸಬೇಕಮ್ಮ II೧ II

ಕರುಣಾ ವಾರಿಧಿಯೆಂದು ಶರಣಾಜನರು
ನಿನ್ನ ಸ್ಮರಣೆಯ ಮಾಡುವರೆ
ಹರಿಣಾಕ್ಷಿ ಕೆಳೆಲೇ ಹರುಷದಿಂದಲಿ ಹರಿ
ಚರಣಾವ ತೋರಿ ಅಘ ಹರಣಾವ ಮಾಡಿಸಮ್ಮ II೨II

ವಾಸಾವನುತ ಸಿರಿ ಶೇಷವಿಠಲನೋಳು
ವಾಸಾವ ಮಾದುವಳೇ
ಘಾಸಿಗೂಲಿಸದೆಲೆ ಈ ಸಮಯದಲಿ
ವಾಸುದೀವಗೆ ಪೇಳಿ ಪೂಶಿಸಬೇಕಮ್ಮ II೩II
**********
ರಮಾ  ಸಮುದ್ರನ ಕುಮಾರಿ ನಿನ್ನ ಸರಿ ಸಮಾನಯಾರಮ್ಮ  ।।ಪ ।।

ಉಮೇಶ ಮೊದಲಾದ ಅಮರನಿಖರವೋ  ನಮಿಸಿ ಭ್ರಮಿಸಿ ನಿಮ್ಮ ಚರಣ ಭಜಿಸುವ ।। ಅ . ಪ ।।

ಅಪಾರಮಹಿಮನ  ವ್ಯಾಪಾರಂಗಳ  ತಿಳಿದು ಕಾಪಡಲೇ  ಜಗವ ।
ಕೋಪಾರಹಿತಳಾಗಿ  ಶ್ರೀಪತಿಯೊಳು  ನಮ್ಮ ತಾಪತ್ರಯವ ಪೇಳಿ  ಪೋಷಿಸಬೇಕೆಂದು ।।೧।।   ।।ರಮಾ।।


ಕರುಣಾ  ವಾರಿಧಿಯೆಂದು  ಶರಣಜನರು  ನಿಮ್ಮ ಸ್ಮರಣೆಯ  ಮಾಡುತಿಹರೆ ।
ಮರಣ ಕಾಲದಿ  ಅಘಹರಣಗೊಳಿಸಿ  ನಮ್ಮ ಕರುಣದಿಂದಲಿ  ನಿಮ್ಮ ಚರಣದೊಳಿರಿಸಮ್ಮ ।।೨।।   ।।ರಮಾ।।


ವಾಸವಂದಿತ ಸಿರಿ  ಶೇಷವಿಠಲನೊಳು  ವಾಸವ  ಮಾಡುತಿಹರೆ ।
ಘಾಸಿಪಡಿಪನಮ್ಮ  ಈ ಸಮದಲಿ ವಾಸವಾತ್ಮಗೆ  ಪೇಳಿ  ಪೋಷಿಸಬೇಕೆಂದು ।।೩।।        ।।ರಮಾ।।
*******