.. ..by modalakallu sheshadasaru
ಫಾಲಲಿಪಿ ಪರಿಹರಿಸಿಕೊಂಬರುಂಟೆ |ಕಾಲನಾಮಕ ನಿನ್ನ ಕ್ಲಪ್ತದಲಿ ಬರೆದಿದ್ದ ಪ
ಸಾಲು ಸ್ಫಟಿಕದ ರತ್ನಮಯವಾದ ಮನೆ ಇರಲು ವಿಶಾಲ ಪರ್ನದ್ದಾದರಿರಬಾರದೆ ||ಆಳುಗಳು ಬಹುಮಂದಿ ಇದ್ದವಗೆನುಡಿದ ಮಾತಾಲಿಸುವ ನರನೊಬ್ಬನಿರಬಾರದೆ 1
e್ಞÁನದಲಿ ಹರಿರೂಪ ಬಹಿರಂತರದಿ ನೋಳ್ಪಆನಂದದಲಿ ಸತತ ಇದ್ದವಗೆ ||ಧ್ಯಾನದಲಿ ಕ್ಷಣಮಪಿ ಕರುಹು ಕಾಣಿಸಿಕೊಂಬ ದೀನ ಮನವಾದರೂ ಇರಬಾರದೆ 2
ಕೋಟಿ ದ್ರವ್ಯವು ಇದ್ದು ನೀಟ ಕವಡಿ ಇಲ್ಲದೆಕಾಟ ಕಾಣದೆ ಸೊರಗಿ ಮರುಗಿದಂತೆ ||ಹಾಟಕಾಂಬರಧಾರ ಗುರು ವಿಜಯವಿಠ್ಠಲರೇಯದಾಟುವರಿಲ್ಲ ನಿನ್ನ ಪ್ರಬಲ ಶಾಸನವ 3
****