Showing posts with label ರಾಘವೇಂದ್ರ ಗುರುರಾಯರ ಸೇವಿಸಿರೊ shreeda vittala RAGHAVENDRA GURURAYARA SEVISIRO. Show all posts
Showing posts with label ರಾಘವೇಂದ್ರ ಗುರುರಾಯರ ಸೇವಿಸಿರೊ shreeda vittala RAGHAVENDRA GURURAYARA SEVISIRO. Show all posts

Sunday 5 December 2021

ರಾಘವೇಂದ್ರ ಗುರುರಾಯರ ಸೇವಿಸಿರೊ ankita shreeda vittala RAGHAVENDRA GURURAYARA SEVISIRO







kruti by Srida Vittala Dasaru  Karjagi Dasappa

on ಶ್ರೀ ರಾಘವೇಂದ್ರರು


ರಾಘವೇಂದ್ರ ಗುರುರಾಯರ ಸೇವಿಸಿರೊ ಸೌಖ್ಯದಿ ಜೀವಿಸಿರೊ ಪ


ವಾಸೋತ್ತುಂಗಾ ತೀರದಲ್ಲೆ ನಿಂತು ವಸುಧೆಯೊಳು ಬಂದು ಅ.ಪ.


ಆ ಸುಧೀಂದ್ರ ಕರ ಸರೋಜ ಸಂಜಾತ ವಸುಧೆಯೊಳು ಪುನೀತಾ

ದಾಶರಥಿಯ ದಾಸತ್ವವ ತಾನೂಹಿಸಿ ದುರ್ಮತಿಗಳ ಜಯಿಸಿ ತ್ಯಜಿಸಿ

ಈ ಸಮೀರಮತ ಸಂಸ್ಥಾಪಕರಾಗಿ ನಿಂದಕರನು ನೀಗಿ ಭೂಸುರರಿಗೆ

ಸಂಸೇವಸಹಾಚರಣೀ ಕಂಗೊಳಿಸುವ ಕರುಣಿ 1


ಕುಂದದೆ ವರ ಮಂತ್ರಾಲಯದಲ್ಲಿರುವಾ ಕರೆದಲ್ಲಿಗೆ ಬರುವಾ

ಸಂದರುಶನದಿಂದಲಿ ಮಹತ್ಪಾಪ ಪರಿದೋಡಿಸಲಾಪಾ

ವೃಂದಾವನ ಮೃತ್ತಿಕೆ ಜಲಪಾನ ಮುಕ್ತಿಗೆ ಸೋಪಾನ

ಮಂದ ಭಾಗ್ಯರಿಗೆ ದೊರೆಯದಿವರ ಸೇವಾ ಶರಣರ ಸಂಜೀವಾ 2


ಶ್ರೀದವಿಠ್ಠಲನ ಸನ್ನಿಧಾನ ಪಾತ್ರಾ ಸಂಸ್ತುತಿಸಿದ ಮಾತ್ರಾ

ಮೋದಬಡಿಸುವ ತಾನಿಹಪರದಲ್ಲಿ ಈತಗೆ ಸಮರೆಲ್ಲಿ

ಮೇದಿನಿಯೊಳಗಿನ್ನರಸಲು ಕಾಣೆ ಪುಸಿಯಿಲ್ಲೆನ್ನಾಣೆ

ಪಾದಸ್ಮರಣೆ ಮಾಡದವನೆ ಪಾಪಿ ನಾ ಪೇಳ್ವೆನು 3

***



ರಾಘವೇಂದ್ರ ಗುರಾರಾಯರ ಸೇವಿಸಿರೋ | 
ಸೌಖ್ಯದಿ ಜೀವಿಸಿರೋ | ಪ |

ತುಂಗಾತೀರಾದಿ ರಘುರಾಮನ ಪೂಜಿಪರಾ | 
ನರಸಿಂಗನ ಭಜಕರಾ | ಅ ಪ |

ಶ್ರೀ ಸುಧೀಂದ್ರಕರ ಸರೋಜ ಸಂಜಾತ | ಜಗದೊಳಗೆ ಪುನೀತ |
ದಾಶರಥಿಯ ದಾಸತ್ವವ ತಾ ವಹಿಸೀ | ದುರ್ಮತಗಳ ಜಯಿಸೀ |
ಈ ಸಮೀರಾಮತ ಸಂಸ್ಥಾಪಕರಾಗೀ | ನಿಂದಕರಾನು ನೀಗೀ |
ಭೂಸುರಾಗೆ ಸಂಸೇವ್ಯ ಸದಾಚರಣೀ | ಕಂಗೊಳಿಸುವ ಕರುಣೀ | ೧ |

ಕುಂದದೆ ವರ ಮಂತ್ರಾಲಯದಲ್ಲಿರುವ | ಕರೆದಲ್ಲಿಗೆ ಬರುವ |
ಬೃಂದಾವನ ಗತ ಮೃತ್ತಿಕೆ ಜಲಪಾನ | ಮುಕ್ತಿಗೆ ಸೋಪಾನ |
ಸಂದರುಶನ ಮಾತ್ರದಲಿ ಮಹತ್ಪಾಪ | ಬಡಿದೋಡಿಸಲಾಪ |
ಮಂದಭಾಗ್ಯಗೆ ದೊರೆಯದಿವರಾ ಸೇವ | ಶರಣರ ಸಂಜೀವ | ೨ |

ಶ್ರೀದವಿಟ್ಠಲನ ಸನ್ನಿಧಾನ ಪಾತ್ರ | ಸಂಸ್ತುತಿಸಿದ ಮಾತ್ರ |
ಮೋದಪಡಿಸುತಿಹ ತಾನಿಹಪರದಲ್ಲಿ | ಈತಗೆ ಸರಿಯೆಲ್ಲಿ |
ಮೇದಿನಿಯೊಳಗಿನ್ನರಸಲು ನಾ ಕಾಣೆ | ಪುಸಿಯಲ್ಲೆನ್ನಾಣೆ |
ಪಾದಸ್ಮರಣೆಯ ಮಾಡದವನೆ ಪಾಪಿ | ನಾ ಪೇಳುವೆ ಸ್ಥಾಪಿ | ೩ |
****

ರಾಗ - ಯದು ಕುಲ ಕಾಂಬೋದಿ 
ತಾಳ - ಆದಿತಾಳ (raga, taala may differ in audio)

ರಾಘವೇಂದ್ರ ಗುರು ರಾಯರ ಸೇವಿಸಿರೋ ಸೌಖ್ಯದಿ ಜೀವಿಸಿರೋ ॥ಪ॥
ತುಂಗಾತೀರದಿ ರಘುರಾಮನ ಪೂಜಿಪರೋ ನರಸಿಂಘನ ಭಜಕರೋ ॥ಅಪ॥

ಶ್ರೀ ಸುಧೀಂದ್ರ ಕರ ಸರೋಜ ಸಂಜಾತ ಜಗದೊಳಗೆ ಪುನೀತ
ದಶರಥಿಯ ದಾಸತ್ವವ ತಾ ವಹಿಸಿ ದುರ್ಮತಿಗಳ ಜಯಿಸಿ
ಈ ಸಮೀರ ಮತ ಸಂಸ್ಥಾಪಕರಾಗಿ ನಿಂದಕರನು ನೀಗಿ
ಭೂಸುರರಿಗೆ ಸಂಸೇವ್ಯ ಸದಾಚರಣೀ ಕಂಗೊಳಿಸುವ ಕರುಣಿ ॥೧॥

ಕುಂದದ ವರ ಮಂತ್ರಾಲಯದಲ್ಲಿರುವ ಕರೆದಲ್ಲಿಗೆ ಬರುವ
ಬೃಂದಾವನಗತ ಮೃತ್ತಿಕೆ ಜಲಪಾನ ಮುಕುತಿಗೆ ಸೋಪಾನ
ಸಂದರುಶನಮಾತ್ರದಲಿ ಮಹಾತಾಪ ಬಡಿದೋಡಿಸಲಾಪ
ಮಂದಭಾಗ್ಯರಿಗೆ ದೊರೆಯದು ಇವರ ಸೇವಾ ಶರಣರ ಸಂಜೀವಾ ॥೨॥

ಶ್ರೀದ ವಿಠಲನ ಸನ್ನಿಧಾನ ಪಾತ್ರ ಸಂಸ್ಕೃತಿಸಲು ಮಾತ್ರ
ಮೋದ ಪಡಿಸುತಿಹ ತಾನಿಹಪರದಲ್ಲಿ ಈತಗೆ ಸರಿಯಲ್ಲಿ
ಮೇದಿನಿಯೊಳಗಿನ್ನರಸಲು ನಾ ಕಾಣೆ ಪುಸಿಯಲ್ಲಾಣೆ
ಪಾದಸ್ಮರಣೆಯ ಮಾಡದವನೆ ಪಾಪಿ ನಾ ಪೇಳುವೆ ಸ್ಥಾಪಿ ॥೩॥
***


Raghavendra Guru Rayara sevisiro soukyadi jivisiro ||pa||

tungatheeradi raghuramana poojiparo narasinghana bhajakaro ||ap||

sree sudheendra kara saroja sanjata jagadolage punitA
dasharatiya dasatvava ta vahisi durmatigala jayisi
ee sameera mata samstApakarAgi nindakaranu neegi
busurarige samsevya sadacharanee kangolisuva karuni ||1||

kundada vara mantralayadalliruva
karadallige baruva brindavanagata mrittike jalapAna mukutige sopAna
sandarushanamAtradali mahatApa badidoisalApa
mandabhAgyarige doreyadiruva seva sharanara sanjeevA ||2||

srida vithalana sannidana pAtra
samstutisalu mAtra moda padisutiha tanihaparadalli
itage sariyalli mediniyolaginnarasalu nA kane pusiyallaane
pAdasmaraneya madadavane papi na peluve stapi ||3||
***

ರಾಘವೇಂದ್ರ ಗುರುರಾಯರ ಸೇವಿಸಿರೊ ಸೌಖ್ಯದಿ ಜೀವಿಸಿರೊ ||pa||

ವಾಸೋತ್ತುಂಗಾ ತೀರದಲ್ಲೆ ನಿಂತು ವಸುಧೆಯೊಳು ಬಂದು ||a.pa||

ಆ ಸುಧೀಂದ್ರ ಕರ ಸರೋಜ ಸಂಜಾತ ವಸುಧೆಯೊಳು ಪುನೀತಾ
ದಾಶರಥಿಯ ದಾಸತ್ವವ ತಾನೂಹಿಸಿ ದುರ್ಮತಿಗಳ ಜಯಿಸಿ ತ್ಯಜಿಸಿ
ಈ ಸಮೀರಮತ ಸಂಸ್ಥಾಪಕರಾಗಿ ನಿಂದಕರನು ನೀಗಿ ಭೂಸುರರಿಗೆ
ಸಂಸೇವಸಹಾಚರಣೀ ಕಂಗೊಳಿಸುವ ಕರುಣಿ ||1||

ಕುಂದದೆ ವರ ಮಂತ್ರಾಲಯದಲ್ಲಿರುವಾ ಕರೆದಲ್ಲಿಗೆ ಬರುವಾ
ಸಂದರುಶನದಿಂದಲಿ ಮಹತ್ಪಾಪ ಪರಿದೋಡಿಸಲಾಪಾ
ವೃಂದಾವನ ಮೃತ್ತಿಕೆ ಜಲಪಾನ ಮುಕ್ತಿಗೆ ಸೋಪಾನ
ಮಂದ ಭಾಗ್ಯರಿಗೆ ದೊರೆಯದಿವರ ಸೇವಾ ಶರಣರ ಸಂಜೀವಾ ||2||

ಶ್ರೀದವಿಠ್ಠಲನ ಸನ್ನಿಧಾನ ಪಾತ್ರಾ ಸಂಸ್ತುತಿಸಿದ ಮಾತ್ರಾ
ಮೋದಬಡಿಸುವ ತಾನಿಹಪರದಲ್ಲಿ ಈತಗೆ ಸಮರೆಲ್ಲಿ
ಮೇದಿನಿಯೊಳಗಿನ್ನರಸಲು ಕಾಣೆ ಪುಸಿಯಿಲ್ಲೆನ್ನಾಣೆ
ಪಾದಸ್ಮರಣೆ ಮಾಡದವನೆ ಪಾಪಿ ನಾ ಪೇಳ್ವೆನು||3||
****



ರಾಘವೇಂದ್ರ ಗುರುರಾಯರ ಸೇವಿಸಿರೋ
ಸೌಖ್ಯದಿ ಜೀವಿಸಿರೋ
ತುಂಗಾತಿರದಿ ರಘುರಾಮರ ಪೂಜಿಪರೋ
ನರಸಿಂಗನ ಭಜಕರೋ


ಶ್ರೀ ಸುಧೀಂದ್ರ ಕರ ಸರೋಜ ಸಂಜಾತ
ಜಗದೊಳಗೆ ಪುನೀತ
ದಾಶರಥಿಯ ದಾಸತ್ವವ ತಾನ್ವಹಿಸಿ
ದುಮ೯ತಗಳ ಜಯಿಸಿ


ಈ ಸಮೀರ ಮತದ ಸಂಸ್ಥಾಪಕರಾಗಿ
ನಿಂದಕರನು ನೀಗಿ
ಭೂಸುರರಿಗೆ ಸಂಸೆವ್ಯ ಸದಾಚರಣಿ
ಕಂಗೊಳಿಸುವ ಕರುಣಿ


ಕುಂದದೆ ವರ ಮಂತ್ರಾಲಯದಲ್ಲಿರುವ
ಕರೆದಲ್ಲಿಗೆ ಬರುವ
ಬ್ರಂದಾವನಗತ ಮೈತ್ತಿಕೆ ಜಲಪಾನ
ಮುಕ್ತಿಗೆ ಸೋಪಾನ

ಸಂದರ್ಶನ ಮಾತ್ರದಲಿ ಮಹಾಪಾಪ
ಬಡಿದೊಡಿಸಲಾಪ
ಮಂದಭಾಗ್ಯರಿಗೆ ದೊರಕದಿವರ ಸೇವಾ
ಶರಣರ ಸಂಜೀವ

ಶ್ರೀಧರ ವಿಠಲನ ಸನ್ನಿಧಾನಪಾತ್ರ
ಸಂಸ್ತುತಿಸುವ ಮಾತ್ರ
ಮೋದಪಡಿಸುತಿಹ ತಾನಿಹಪರದಲ್ಲಿ
ಈತಗೆ ಸರಿಯೆಲ್ಲಿ

ಮೇದಿನಿಯೋಳಗಿನ್ನರಸರು ನಾ ಕಾಣೆ
ಪುಸಿಯೆಲ್ಲನ್ನಾಣೆ
ಪಾದಸ್ಮರಣೆಯ ಮಾಡದವನೆ ಪಾಪಿ

ನಾ ಪೇಳುವೆ ಸ್ಥಾಪಿ
*******