Showing posts with label ವೃಂದಾವನ ಲಕ್ಷ್ಮಿ ಜಯಜಯತೂಸುಂದರಿ govinda. Show all posts
Showing posts with label ವೃಂದಾವನ ಲಕ್ಷ್ಮಿ ಜಯಜಯತೂಸುಂದರಿ govinda. Show all posts

Saturday, 16 November 2019

ವೃಂದಾವನ ಲಕ್ಷ್ಮಿ ಜಯಜಯತೂಸುಂದರಿ ankita govinda

by ಗೋವಿಂದದಾಸ
ವೃಂದಾವನ ಲಕ್ಷ್ಮಿ ಜಯಜಯತೂಸುಂದರಿ ಸುಗುಣೆ ಸುಶೀಲೆ ಜಯತು ಜಯ ಪ

ಕ್ಷೀರಾಬ್ಧಿ ಮಥಿಸಲುಸುಧೆಹುಟ್ಟಿ ಬರಲೂನಾರಾಯಣ ಹರುಷಾಶ್ರು ಸುರಿಸಲೂಧಾರಿಣಿಯೊಳಗದು ಗಿಡವಾಗಿ ಶೋಭಿಸೆನಾರಿ ಲಕ್ಷುಮಿಯಂಗ ತುಳಸಿಯೆಂದೂ1

ಆಲಯದಿಪ್ಪತ್ತೆಂಟು ಹೆಜ್ಜೆ ಈಶಾನ್ಯದಿಏಳುದಳಿದ ತುಳಸಿಗಿಡವಮೂಲದಿ ನವರತ್ನವಿಟ್ಟು ಪ್ರತಿಷ್ಠಿಸೆಪಾಲಿಸೆ ವಿಷ್ಣು ತಾನಲ್ಲಿರುವೆನೆಂದು2

ಧಾತ್ರಿನೆಲ್ಲಿಯು ವಾಣಿ ಗಿರಿಜೆಯರಂಶದಿಪೃಥಿವಿಯೊಳಿರೆ ಕಂಡು ತುಳಸಿಯಂಕದಲಿಅರ್ತಿಯಿಂದಲಿ ನಟ್ಟು ಪೂಜೆಯನೆಸಗಲುಪ್ರೀತಿಸಿ ಬ್ರಹ್ಮ ವಿಷ್ಣು ರುದ್ರರೆ ವರವೀವರು3

ಬೃಂದೆ ಜಲಂಧರನರಸಿ ಪತಿವ್ರತೆ-ಯಂದಿರೆ ವಿಷ್ಣುವೊಲಿಸಿ ದುರುಳರ ಗೆಲಿಸೆಬೃಂದೆ ವರವ ಬೇಡಿ ಸಹಗಮನವಾದ ಸ್ಥಳನಿಂದಾನು ವಿಷ್ಣು ತುಳಸಿಯೊಳ್4

ಕಾರ್ತೀಕ ದಾಮೋದರನೆನಿಸಿ ಪ್ರೀತಿಯಿಂದಲಿತುಳಸಿಯಲಿ ತಾ ನೆಲಸಿಘೃತದಿ ಜ್ಯೋತಿಯನಿಟ್ಟು ಪೂಜಿಸಿದವರಿಗೆಅತಿಶಯ ವರವಿತ್ತು ಸ್ವಾಮಿ ಪರಸುವನು5

ಕಟ್ಟಿಗೋಮಯದಿ ಬಳಿದೂಹಿಟ್ಟಲಿ ರಂಗೋಲಿ ಬರೆದೂ ನೀರೆರೆದುಶ್ರೇಷ್ಠದಿ ತೀರ್ಥವಗೊಂಡು ನಿರ್ಮಾಲ್ಯ ಧರಿಸಲುಅಕ್ಷಯವರವಿತ್ತು ದೇವಿ ಮನ್ನಿಪಳೂ6

ವಿಷ್ಣು ಪಾದದಿ ತುಳಸಿ ದಳದಿಂದರ್ಚಿಸಲುಇಷ್ಟ ಪಡುವ ವಾಸುದೇವನು ತಾನುಇಷ್ಟದಿ ತುಳಸಿ ಚರಿತೆ ನಿತ್ಯದಿ ಪಠಿಸಲುಇಷ್ಟಾರ್ಥ ವರವೀವ ಗೋವಿಂದದಾಸರಿಗೆ7
******