Showing posts with label ಹರಿಯನ್ನು ಒಲಿಸಿಕೊಡೋ ಮಾರುತಿರಾಯಾಹರಿಯನ್ನು ಒಲಿಸಿಕೊಡೊ gadugina veeranarayana. Show all posts
Showing posts with label ಹರಿಯನ್ನು ಒಲಿಸಿಕೊಡೋ ಮಾರುತಿರಾಯಾಹರಿಯನ್ನು ಒಲಿಸಿಕೊಡೊ gadugina veeranarayana. Show all posts

Wednesday, 1 September 2021

ಹರಿಯನ್ನು ಒಲಿಸಿಕೊಡೋ ಮಾರುತಿರಾಯಾಹರಿಯನ್ನು ಒಲಿಸಿಕೊಡೊ ankita gadugina veeranarayana

 ..

kruti by ವೀರನಾರಾಯಣ Veeranarayana 


ಹರಿಯನ್ನು ಒಲಿಸಿಕೊಡೋ ಮಾರುತಿರಾಯಾಹರಿಯನ್ನು ಒಲಿಸಿಕೊಡೊ ಪ


ಹರಿಯನ್ನು ನಿನ್ನದೆ ಪರಿ ಮುಖದಿಂದಲೆಸರುವರು ಕಾಣಬೇಕೆಂಬರು ನೋಡೋ ಅ.ಪ.


ಪರಮಭಕ್ತ ನೀನೆಂದೂ ಎಂದೆಂದೂಹರಿಯ ಮೀರನೆಂದು ಒರೆವರು ಮನದಂದುಮೊರೆಯು ನನ್ನದು ಇಂದುಹರಿಗೆ ನಿವೇದಿಸು ಕರುಣಾಸಿಂಧು 1


ಒಡೆಯ ರಾಮಗೆ ನೀ ದೂತ ಎಂದಿಗೂ ಆತನಡೆಸುವ ನಿನ್ನ ಮಾತಬಡವ ನಾನೊಬ್ಬನು ಕಡು ಕರುಣೆಯ ಭಿಕ್ಷೆಕೊಡು ಎಂದು ಬೇಡುವೆನೆಂದು ನೀ ತಿಳಿಸುತ 2


ಹಾಯಗೊಡರು ಜೀಯಾ ಬಾಗಿಲದಲಿಕಾಯುವ ಜಯ ವಿಜಯಾಶ್ರೀಯರಸನ ಕಾಂಬುಪಾಯವ ಕಲಿಸಿಬಡಪಾಯೆನಗೆ ನೀ ನೀಡುತ ಕಯ್ಯಾ 3


ಸದಯನೆ ಕರುಣ ಬಂತೆ ಸಂಸಾರದಿಕುದಿಸುವದೆನ್ನ ಚಿಂತೆಗದುಗಿನ ವೀರನಾರಾಯಣನೆನ್ನೊಳು ಸದಾಕಾಲದಿ ಹೃದಯದಿ ನಿಲುವಂತೆ 4

***