Showing posts with label ನಿನ್ನವರ ಧರ್ಮ ವಿಹಿತವಾಗುವುದು jagannatha vittala. Show all posts
Showing posts with label ನಿನ್ನವರ ಧರ್ಮ ವಿಹಿತವಾಗುವುದು jagannatha vittala. Show all posts

Saturday, 14 December 2019

ನಿನ್ನವರ ಧರ್ಮ ವಿಹಿತವಾಗುವುದು ankita jagannatha vittala

ಜಗನ್ನಾಥದಾಸರು
ನಿನ್ನವರ ಧರ್ಮ ವಿಹಿತವಾಗುವುದು ಮ
ತ್ತನ್ಯರಾಚರಿಸಿದ ಧರ್ಮ ಅಧರ್ಮ ಪ

ಕಡಲ ಮಥನದಲಿ ಕಪರ್ದಿ ಕಾಳಕೂಟ
ಕುಡಿಯಲು ಕಂಠಭೂಷಣವಾಯಿತು
ಒಡನೆ ರಾಹು ಕೇತು ಸುಧೆಯ ಪಾನದಿಂದ
ಮಡಿದರೆಂದು ಮೂರ್ಲೋಕವೇ ಅರಿಯೆ 1

ಬಲಿನಿನ್ನ ಮುಕುಟ ಕದ್ದೊಯ್ಯ ಪಾತಾಳಕೆ
ಸಲೆ ಭಕ್ತನೆಂದು ಬಾಗಿಲ ಕಾಯ್ದೆ
ಇಳೆಯೊಳು ಸುರರಿಗೆ ಗೋ ಭೂ ಹಿರಣ್ಯವಿತ್ತಾ
ಖಳ ಜರಾಸಂಧನ ಕೊಲಿಸಿದೆ ಹೋಗಿ 2

ಪತಿವ್ರತ ಧರ್ಮದಿ ಮೃತರಾದ ತ್ರಿಪುರರ
ಸತಿಯರು ಶಿವನಿಂದ ಹತರಾದರು
ಸತಿ ಉಡುಪ ಪತಿಯಿಂದಲಿ
ನಿತ್ಯ ಸೇವೆಯೊಳಿರುವಳು 3

ಮೇದಿನಿಯೊಳು ಪ್ರಾಣಿ ಹಿಂಸಕನೆನಿಸಿದಾ
ವ್ಯಾಧನ ಯಮಿಕುಲೇಶನ ಮಾಡಿದೆ
ವೇದೋಕ್ತ ಕರ್ಮವಾಚರಿಸಿದ ಜಿನನೊಳ್
ಪ್ರಾದುರ್ಭೂತನಾಗಿ ಕೆಡಹಿದೆ ತಮಕೆ 4

ಪರಾಶರನು ಸತ್ಯವತಿಯ ಸಂಬಂಧಿಸೆ
ಶ್ರೀರಮಣ ನೀನವತರಿಸಿದಲ್ಲಿ
ಭವ ಸರೋಜ ಕನ್ನಿಕೆಯಸಾರಲು ಬಿಡುವ ಜಗನ್ನಾಥ ವಿಠಲ 5
******