yes
ಅಂಜನ ಕುವರ ಆಂಜನೇಯನೇ
ಅಮಿತಾ ಪರಾಕ್ರಮೆ ನಮೋ ನಮೋ ll
ರಾಮ ನಾಮದ ಹಿರಿಮೆಯ ಅರಿತ
ಮಹಿಮಾ ಪುರುಷನೇ ನಮೋ ನಮೋ ll
ಅಮಿತಾ ಪರಾಕ್ರಮೆ ನಮೋ ನಮೋ ll
ರಾಮ ನಾಮದ ಹಿರಿಮೆಯ ಅರಿತ
ಮಹಿಮಾ ಪುರುಷನೇ ನಮೋ ನಮೋ ll
Il ಅಂಜನ ಕುವರ ll
ಸೂರ್ಯನ ಓಲಿಸಿ ಸಕಲ ಶಾಸ್ತ್ರವ ಕಲಿತ
ಹನುಮನೇ ನಮೋ ನಮೋ
ವಾಯುದೇವನ ಅಂಶದಿ ಜನಿಸಿದ
ಜ್ಞಾನಪೂರ್ಣ ನಮೋ ನಮೋ
ಜ್ಞಾನಪೂರ್ಣ ನಮೋ ನಮೋ
Il ಅಂಜನ ಕುವರ ll
ಸೀತೆಯ ಹುಡುಕುವ ಕಾರ್ಯಕ್ಕೆ ಒಪ್ಪಿದ
ಸುಗ್ರಿವ ಮಂತ್ರಿ ನಮೋ ನಮೋ
ಜಾನಕಿ ಇರುವನ್ನು ಕಂಡ ಹನುಮನೇ
ವಜ್ರಾಂಗ ದೇವ ನಮೋ ನಮೋ
ವಜ್ರಾಂಗ ದೇವ ನಮೋ ನಮೋ
Il ಅಂಜನ ಕುವರ ll
ವೈನಾಕ ಪರ್ವತ ಕುಟ್ಟಿದ ಶೂರನೇ
ಅತೀ ಬಲ ಹನುಮ ನಮೋ ನಮೋ
ವೈನಾಕರನ್ನು ಹರಿಸಿದ ದೇವ ಅಮಿತಾ
ಪರಾಕ್ರಮೆ ನಮೋ ನಮೋ
ಪರಾಕ್ರಮೆ ನಮೋ ನಮೋ
Il ಅಂಜನ ಕುವರ ll
ಸುರಸೆಯ ಬಾಯೊಳು ಹೊಕ್ಕು
ಹೊರ ಬಂದ ದಿವ್ಯ ಚರಿತನೇ ನಮೋ ನಮೋ
ದಕ್ಷ ಕುವರಿಯ ಹರಕೆಯ ಪಡೆದ
ಭಕ್ತ ಶ್ರೇಷ್ಠನೇ ನಮೋ ನಮೋ
ಭಕ್ತ ಶ್ರೇಷ್ಠನೇ ನಮೋ ನಮೋ
Il ಅಂಜನ ಕುವರ ll
ಸಿಂಹಿಕೆಯನ್ನ ವಧಿಸಿದ ಧೀರನೇ
ದಿವ್ಯ ಕಾಯನೇ ನಮೋ ನಮೋ
ಸೀತೆಗೆ ಮುದ್ರಿಕೆ ನೀಡಿದ ಶೂರಂ
ರಾಮದಾಸ ನಮೋ ನಮೋ
ರಾಮದಾಸ ನಮೋ ನಮೋ
Il ಅಂಜನ ಕುವರ ll
ಭಕ್ತರ ಸಲಹಲು ಎಲ್ಲೆಡೆ ನೆಲೆಸಿದ
ಮಂಗಳ ರೂಪನೇ ನಮೋ ನಮೋ
ರಾಮ ಎಂದರೆ ನಲಿ ನಲಿದಾಡುವ
ರಾಮ ಭಕ್ತನೇ ನಮೋ ನಮೋ
ರಾಮ ಭಕ್ತನೇ ನಮೋ ನಮೋ
Il ಅಂಜನ ಕುವರ ll
Il ರಾಮನಾಮದ ll
Il ಅಂಜನ ಕುವರ ll
********