Showing posts with label ರಾಘವೇಂದ್ರ ಗುರುವೆ ನಿಮ್ಮಯ ಅನುರಾಗವ kamalesha vittala. Show all posts
Showing posts with label ರಾಘವೇಂದ್ರ ಗುರುವೆ ನಿಮ್ಮಯ ಅನುರಾಗವ kamalesha vittala. Show all posts

Thursday, 1 July 2021

ರಾಘವೇಂದ್ರ ಗುರುವೆ ನಿಮ್ಮಯ ಅನುರಾಗವ ankita kamalesha vittala

 ರಾಗ: ಕಲ್ಯಾಣಿ ತಾಳ: ಮಿಶ್ರಛಾಪು

ರಾಘವೇಂದ್ರ ಗುರುವೆ ನಿಮ್ಮಯ ಅನು-

ರಾಗವ ನಾ ಬೇಡುವೆ

ಬಾಗಿ ನಮಿಪೆ ದಯಾಸಾಗರ ಯತಿವರ

ಜಾಗು ಮಾಡದೆ ಎನ್ನ ಬೇಗ ಸಲಹಿರಿ ಎಂದು ಅ.ಪ

ನಿಮ್ಮ ಆಶ್ರಯ ಜನಕೆ ಸಕಲ ವಿಧ

ನೆಮ್ಮದಿಯನೆ ಈವುದು

ಅಮ್ಮೈಸಿದವರ ದುಷ್ಕರ್ಮರಾಶಿಗಳನ್ನು

ಹಿಮ್ಮೆಟ್ಟಿಸುವ ವರ ಸುಮ್ಮನಸಾಗ್ರಣಿ 1

ಶ್ರೀ ರಾಘವೇಂದ್ರ ನಮೋ ಎಂಬುವ ಒಂದೇ

ದಾರಿ ನಂಬುತ ಬಂದಿಹೆ

ಸಾರ ಸದ್ಭಕ್ತಿ ಶರೀರ ದಂಡನೆಯಲ್ಲಿ

ಧೀರನಲ್ಲದ ಎನ್ನ ಗಾರು ಮಾಡಲು ಸಲ್ಲ 2

ಮೊದಲೆರಡವತಾರದಿ ರಾಜರು ಎನಿಸಿ

ಮುದದಿ ಮೂರನೆಯ ರೂಪದಿ

ಸದಮಲ ಯತಿಸಾರ್ವಭೌಮ ಪಟ್ಟವನಾಳ್ದು

ನಿಧಿಯಾಗಿ ನಿಂತಿರಿ ಬದಿಗ ಭಕ್ತರಿಗೆಲ್ಲ 3

ಶಾಪಾನುಗ್ರಹಶಕ್ತರೆ ಬಲ್ಲೆನೆ ನಿಮ್ಮ

ಅಪಾರ ಮಹಿಮೆಯನು

ಸಾಪೇಕ್ಷೆಯಲಿ ನಿಮ್ಮ ಶ್ರೀಪಾದವನು ಸೇರ್ದೆ

ಆಪತ್ತುಗಳ ಹರಿಸಿ ಕಾಪಾಡಿರಿ ಎಂದು 4

ಮಂತ್ರಾಲಯ ಪ್ರಭುವೆ ವಾಂಛಿತಪ್ರದ

ಚಿಂತಾ ರತುನ ಸಮರೆ

ಎಂತುಂಟೊ ನಿಮ್ಮೊಳು ಸಂತಸದಲಿ ರಮಾ-

ಕಾಂತವಿಠಲ ನಿಂತು ಪಂಥ ಪೂರೈಸುವ

****