Showing posts with label ಗೋವಿಂದ ಗೋವಿಂದ ಗೋವಿಂದ ನನ್ನ ತಾಯಿ ತಂದೆ prasannavenkata GOVINDA GOVINDA GOVINDA NANNA TAAYI TANDE. Show all posts
Showing posts with label ಗೋವಿಂದ ಗೋವಿಂದ ಗೋವಿಂದ ನನ್ನ ತಾಯಿ ತಂದೆ prasannavenkata GOVINDA GOVINDA GOVINDA NANNA TAAYI TANDE. Show all posts

Sunday, 5 December 2021

ಗೋವಿಂದ ಗೋವಿಂದ ಗೋವಿಂದ ನನ್ನ ತಾಯಿ ತಂದೆ ankita prasannavenkata GOVINDA GOVINDA GOVINDA NANNA TAAYI TANDE



by ಪ್ರಸನ್ನವೆಂಕಟದಾಸರು
ಗೋವಿಂದ ಗೋವಿಂದ ಗೋವಿಂದ ನನ್ನತಾಯಿ ತಂದೆ ಗೋವಿಂದ ಪ.

ತಿರುಗಿ ಭವದಲಿ ಗೋವಿಂದ ವೃಥಾಮರುಗಿ ಬಳಲಿದೆನೊ ಗೋವಿಂದಕರಗಿ ತಾಪದಿ ಗೋವಿಂದ ಸಿಡಿಲೆರಗಿಸಿಕೊಂಡೆನೊ ಗೋವಿಂದ 1

ಎಚ್ಚರ ಹಾರಿತು ಗೋವಿಂದ ನಾಮೆಚ್ಚಿದೆ ವಿಷಯಕೆ ಗೋವಿಂದಹುಚ್ಚು ಮಾಡಿತು ಮನ ಗೋವಿಂದ ನಿನ್ನುಚ್ಚರಣಡಗಿತು ಗೋವಿಂದ 2

ಆಸೆಯ ಬಿಡಿಸೈ ಗೋವಿಂದ ನಿನ್ನದಾಸರೊಳಿರಿಸೈ ಗೋವಿಂದಪ್ರಸನ್ನವೆಂಕಟ ಗೋವಿಂದಭವಘಾಸಿಯ ತಪ್ಪಿಸು ಗೋವಿಂದ 3
***


ಗೋವಿಂದ ಗೋವಿಂದ ಗೋವಿಂದ ನನ್ನ ತಾಯಿ ತಂದೆ ಗೋವಿಂದ || ಪ ||

ತಿರುಗಿ ಭವದಲಿ ಗೋವಿಂದ ವೃಥಾ ಮರುಗಿ ಬಳಲಿದೆನೊ ಗೋವಿಂದ

ಕರಗಿ ತಾಪದಿ ಗೋವಿಂದ ಸಿಡಿಲೆರಗಿಸಿ ಕೊಂಡೆನೊ ಗೋವಿಂದ || 1 ||

ಎಚ್ಚರ ಹಾರಿತು ಗೋವಿಂದ ನಾ ಮೆಚ್ಚಿದೆ ವಿಷಯಕ್ಕೆ ಗೋವಿಂದ

ಹುಚ್ಚು ಮಾಡಿತು ಮನ ಗೋವಿಂದ ನಿನ್ನನುಚ್ಚರಣಡಗಿತು ಗೋವಿಂದ || 2 ||

ಆಸೆಯ ಬಿಡಿಸೈ ಗೋವಿಂದ ನಿನ್ನ ದಾಸರೊಳಿರಿಸೈ ಗೋವಿಂದ

ಪ್ರಸನ್ನವೆಂಕಟ ಗೋವಿಂದ ಭವ ಘಾಸಿಯ ತಪ್ಪಿಸು ಗೋವಿಂದ || 3 ||
***

Gōvinda gōvinda gōvinda nanna tāyi tande gōvinda || pa ||

tirugi bhavadali gōvinda vr̥thā marugi baḷalideno gōvinda

karagi tāpadi gōvinda siḍileragisi koṇḍeno gōvinda || 1 ||

eccara hāritu gōvinda nāmeccide viṣayakke gōvinda

huccu māḍitu mana gōvinda ninnanuccaraṇaḍagitu gōvinda || 2 ||

āseya biḍisai gōvinda ninna dāsaroḷirisai gōvinda

prasannaveṅkaṭa gōvinda bhava ghāsiya tappisu gōvinda || 3 ||
***