Showing posts with label ಪಾದ ಕಂಡು ಪಾವನಾದೆನೋ ಶ್ರೀಗಿರಿಯನಿಲಯನ others PAADA KANDU PAAVANAADENO SRI GIRIYA NILAYANA. Show all posts
Showing posts with label ಪಾದ ಕಂಡು ಪಾವನಾದೆನೋ ಶ್ರೀಗಿರಿಯನಿಲಯನ others PAADA KANDU PAAVANAADENO SRI GIRIYA NILAYANA. Show all posts

Tuesday 5 October 2021

ಪಾದ ಕಂಡು ಪಾವನಾದೆನೋ ಶ್ರೀಗಿರಿಯನಿಲಯನ ankita others PAADA KANDU PAAVANAADENO SRI GIRIYA NILAYANA



kruti by Sri. Ramadasaru

ಪಾದ ಕಂಡು ಪಾವನಾದೆನೋ

ಶ್ರೀಗಿರಿಯನಿಲಯನ || ಪ ||


ಪಾದ ಕಂಡು ಪಾವನಾದೆನೋ

ಮಾಧವನ ಪ್ರಸಾದ ಪಡೆದೆನೋ

ಹಾದಿಕಾಣದೆ ಪರಮ ದುರ್ಭವ

ಬಾಧೆಯೊಳು ಬಿದ್ದು ತೊಳಲಿ ಬಳಲುತ

ಮೇಧಿನೀಯೊಳು ಜನುಮ ತಾಳಿ

ಅಭೇಧ ಮತದ ಹಾದಿ ಬಿಟ್ಟು || ಅ.ಪ ||


ನೀಲಬಣ್ಣದೊಪ್ಪುವ ಸುಂದರ ಶುಭಕಾಯ ಇಂದಿರೆ ಲೋಲ ತ್ರಿಜಗ ಮೋಹನಾಕಾರ

ಕೊರಳ ಪದಕ ಮಾಲ ಕೌಸ್ತುಭ ಮುಕುಟ ಮಣಿಹಾರ ರತ್ನದುಂಗುರ

ಕಾಲಲ್ಹೊಳೆಯುವ ಗೆಜ್ಜೆ ಸರಪಳಿ ಶೀಲ ವೈಷ್ಣವ ನಾಮ ಫಣೆಯಲಿ ಕಾಳ ರಕ್ಕಸ ಕುಲಸಂಹಾರನ ಪಾಲಸಾಗರ ಕನ್ಯೆ ವರನ

ಪಾಲಮೂಲೋಕ ಸಾರ್ವಭೌಮನ ಮೇಲು ಭೂವೈಕುಂಠದಲ್ಲಿ || 1 ||


ಉದಯಕಾಲದಿ ಬಾಲನವತಾರ ಮಧ್ಯಾಹ್ನ ಕಾಲದಿ ಸದಮಲಾಂಗದ ಯೌವನಾಕಾರ ಸುಸಂಧ್ಯಾಕಾಲದಿ ಮುದುಕನಾಗಿ ಕಾಂಭ ಮನೋಹರ ಬಹುಮಹಿಮೆಗಾರ

ಪದುಮವದನ ಮದನನಯ್ಯ ಪದುಮಾವತಿಯ ಪ್ರಾಣಪ್ರಿಯ

ಒದಗಿ ಬಂದ ಭಕುತ ಜನರನು ಸುದಯದಿಂದ ಕರೆದು ಪ್ರಸಾದ

ಮುದದಿ ನೀಡುತ ಕೃಪೆಯದೋರಿ ಸದಮಲ ಸಂಪದವ ನೀವನ || 2 ||


ಉಟ್ಟದೂಕುಲ ಶಲ್ಯ ಜರತಾರ ಕೈಯಲ್ಲಿ ಕಂಕಣ ಪಟ್ಟರತ್ನದನಡುವಿಗುಡಿದಾರ ವರ್ಣಿಸುವರಾರೋ ಸೃಷ್ಟಿಯೊಳಗೀತ ಮೀರಿದವತಾರ ದಿನಕೋಟಿ ಪ್ರಭಾಕರ

ಬಿಟ್ಟು ವೈಕುಂಠ ಇಹಕೆ ಸಾಗಿ ಬೆಟ್ಟದ ಮೇಲೆ ವಾಸನಾಗಿ ಕೊಟ್ಟು ವರಗಳ ಮೂರು ಜಗಕೆ ಶಕ್ತಿಯಂದದಿ ಕಾಸುಕೊಳ್ಳುವ

ದುಷ್ಟ ಭೃಷ್ಟರ ಶಿಷ್ಟರೆಲ್ಲರ ಇಷ್ಟದಾಯಕ ಧಿಟ್ಟ ದೇವನ || 3 ||


ಒಂದೆ ಮನದಲಿ ಸಕಲ ಸೇವಕರು ಭಯ ಭಕುತಿಯಿಂದಲಿ ಬಂದು ಹರಕೆಯ ತಂದು ನೀಡುವರು

ತುಂಬುರು ನಾರದರೊಂದಿಗಾನದಿಂ ಪಾಡಿ ಪೊಗಳುವರು ಆನಂದ ಕೋರುವರು

ಹೊಂದಿ ಭಜಿಸುತ ಸಪ್ತ ಋಷಿಗಣ ಬಂದು ಇಳಿವರು ಬಿಡದೆ ಅನುದಿನ ವಂದ್ಯ ನಿಗಮಾದಿ ಬಂಧು ಭಜಿಪರ ಕಂದುಗೊರಳಾದಿ ಬ್ರಹ್ಮಸುರರಿಂ

ಗಂಧ ಪರಿಮಳ ಕುಸುಮ ದ್ರವ್ಯಗಳಿಂದ ಸೇವೆಯಗೊಂಬ ದೇವನ || 4 ||


ತೀರದೀತನ ಲೋಕ ಶೃಂಗಾರ ಏರಿ ನೋಡಲು ಪಾರ ಗಿರಿತುದಿ ಗಾಳಿಗೋಪುರ ಮುಂದೆ ನಡೆಯಲು ದಾರಿಯಲಿ ಕೊಳ್ಳ ಏಳು ವಿಸ್ತಾರ ಪರಮ ಪರತರ

ತೋರುವ ಮಹಾಗುಡಿಯ ಗೋಪುರ ದ್ವಾರ ಚಿನ್ನದ ಕಳಸ ಬಂಗಾರ ಗಾರು ಮಾಡದೆ ದಾಸ ಜನರನು ತಾರತಮ್ಯದಿ ಪೊರೆಯಲೋಸುಗ

ಸೇರಿಧಾರುಣಿ ವೈಕುಂಠವೆನಿಸಿದ ಧೀರವೇಂಕಟ ಶ್ರೀಶ ರಾಮನ || 5 ||

***


pAda kaMDu pAvanaadeno ShrIgiriya nilayana ||p||

paada kaMDu pAvanAdeno mAdhavana prasAda paDedeno | hAdigAnade parama durBava bADheyolu bidu toLali baLaluta| medinIyoLu januma taaLi abheda matada hAdi biTTu ||a.p||


nIlavarNadopuva sundara | ShubhakAya indirelola trijaga mohanAkAra | koraLa padaka mAla koustuBa mukuTa maNihAra | ratnaduMgura || kAlalhoLeyuva gejje sarapaLi | Sheela vaiShnava nAma Paneyali | kAlarakkasa kula saMhArana pAlasAgara kanyavarana | pAla mUrloka sArvabhoumana melu BhU vaikuMThadalli.. ||1||


udayakAladi bAlanavatAra| madyAnhakAladi sadamalAMgada youwanAkara | susaMdhyakAladi mudukanAgi kAmba manohara| bahu mahimegAra || padumavadana madananayya padumAvatiya prANapriya | odagi banda Bakuta janaranu udayadinda karedu prasada| mudadi nIDuta krupeya tori sadamala saMpadavanIvana... || 2 ||


uTTadUkula shalyejaratAra | kaiyyalli kaMkana paTTaratnada naDuviguDidaara | varNisuvararo srushTHiyolagItamIridavatAra | dinakoTi prabhAkara || biTTu vaikuMTHa ihake sAgi beTTada mele vAsanAgi | koTTu varagaLa mUrujagake jaTTiyandadi kAsu koLLuva | dushTa BhrasTara ShiSTharellara iShTadAyaka diTTa devana .. || 3 ||


onde manadali sakala sevakaru| Baya Bakutiyindali taMdu harakeya taMdu nIDuvaru | tuMburu nAradarAdigAnadiM pADi pogaLuvaru | aanaMda kOruvaru || poMdi Bajisuta sapta ruShigaNa | baMdu iLivaru biDade anudina| vaMdya nigamAdi baMdu Bajipara taMdugoraLAdi bramha surariM | gaMDha parimaLa kusuma dravyagaLinda seveyagoMba devana.. || 4 ||


tIraditana loka Shringara | eri noDalu pAra giritudi gALigopura | muMde nadDeyalu dAriyalli koLLa ELu vistAra | parama paratara | toruva maha guDiya gopura dwAra chinnada kaLasa Bangara| dArumADade dAsa janaranu tAratamyadi poreyalosuga | seri Dharuni vaikuMThavenisida DhIravenkata Shreesha rAmana... || 5 ||

***