Showing posts with label ಹರಿಯ ದಿವ್ಯ ನಾಮ ಹರಿಯ ದಿವ್ಯ ನಾಮ ಮರೆದು purandara vittala. Show all posts
Showing posts with label ಹರಿಯ ದಿವ್ಯ ನಾಮ ಹರಿಯ ದಿವ್ಯ ನಾಮ ಮರೆದು purandara vittala. Show all posts

Saturday, 7 December 2019

ಹರಿಯ ದಿವ್ಯ ನಾಮ ಹರಿಯ ದಿವ್ಯ ನಾಮ ಮರೆದು purandara vittala

ರಾಗ ಉದಯರಾಗ. ಆಟ ತಾಳ

ಹರಿಯ ದಿವ್ಯ ನಾಮ ||ಪ||
ಹರಿಯ ದಿವ್ಯ ನಾಮ ಮರೆದು ಬಾಯಲಿ ಬರೆ
ಮರೆದೊಮ್ಮೆ ಜನ್ಮ ತಾನೆಲ್ಲಿಹುದೊ ||ಅ||

ನಾರಗಾನೆನ್ನಲು ಕೇಳಿ ನಾರಾಯಣ ಕ್ಷೀರಸಾಗರದಲ್ಲಿ ಮಲಗಿರಲು
ಬೇಗದಿಂದಲೆ ಒಡಗೊಂಡು ಬನ್ನಿರೊ ಅಜಮಿಳನ ಬಾಧಿಸುತ ಧರೆ ಯಮದೂತರು ||

ಅಚ್ಚ ತುಲಸಿ ದಂಡೆ ಹಸ್ತದಲಿ ಶಂಖ ಚಕ್ರ ಒಪ್ಪುವ ಊರ್ಧ್ವಪುಂಡ್ರ ವಜ್ರಪಂಜರ
ವಿಷ್ಣು ಸರ್ವೋತ್ತಮ ಕರುಣಾಕರ ಹರಿಯೆಂದು ಕೃಷ್ಣರಾಯರ ಸ್ತುತಿಸುತ ಬಂದರಯ್ಯ ||

ಅಂಜದಿರಂಜದಿರಜಮಿಳನೆ ಗೋವಿಂದ ನಿಮ್ಮನು ಕರೆಸಿದರು ಬಾರಯ್ಯ
ಕೊಂಡ್ಹೋಗಿ ಲಕ್ಷ್ಮೀಪತಿಯಿದ್ದಲ್ಲಿಗೆ ಬಂದರೆ ಪುಷ್ಪಕವಿಮಾನದೊಳು ನಿಂದಿರಿಸುವ ||

ಪಾತಕವು ಹರಿದವು ದೂತರೋಡಿದರು ಸಾತ್ವಿಕ ಧರ್ಮಿಯೆಂದೆನಿಸಿಕೊಂಡೆ ಶ್ರೀ-
ಪತಿಯ ಪುಷ್ಪಕವನೇರಿ ವೈಕುಂಠಯಾತ್ರೆ ಮಾಡಿದಜಮಿಳನು ||

ಸಕಲಪಾಪವು ಮಾಡಿದಜಮಿಳನು ಅಮಲಕೀರ್ತಿ ಪಡೆದು ಬಂದ ನೋಡಿರೊ
ಲಕ್ಷ್ಮೀನಾರಾಯಣ ಪುರಂದರವಿಠಲನ್ನ ಭಕ್ತವತ್ಸಲನೆಂಬ ಬಿರುದಲ್ಲವೆ ||
***

pallavi

hariya divya nAma

anupallavi

hariya divya nAma maredu bAyali bare maredomme janma tAnellihudo

caraNam 1

narakAnennalu kEli nArAyaNa kSIrasAgaradalli malagiralu
bEgadindale oDakoNDu banniro ajamiLana bAdhisuta tare yama dUtaru

caraNam 2

acca tulasi daNDe hastadali shanka cakra oppuva UrdhvapuNDara vajra panjara
viSNu sarvOttama karuNAkara hariyendu krSNarAyara stutisuta bandharayya

caraNam 3

anjadi ranjadirajamiLane gOvinda nimmanu karesidaru bArayya
koNDhOgi lakSmIpatiyiddallige bandide puSpaka vimAnadoLu nindirisuva

caraNam 4

pAtakavu haridavu dUtarODidaru sAtvIka dharmiyendenisi koNDe shrI-
patiya puSpakavanEri vaikuNTha yAtre mADidajamiLanu

caraNam 5

sakala pApavu mADidajamiLanu amalakIrti paDedu banda nODirO
lakSmInArAyaNa purandara viTTalanna bhaktavatsalanemba birudallave
***