ಕೇಳೋನಂದ ಇದು ಏನು ಚೆಂದ
ಹಾಲಿನ್ಹರವಿಯ ಒಡೆದೋಡಿ ಬಂದು
ಬಾಲರನು ಕೂಡ್ಯಾಡಿ ಗೋವಿಂದ
ಬವಣೆಬಡಿಸುವ ಬಲುಬಗೆಯಿಂದ ಪ
ಕಣ್ಣ ತೆರೆದು ಉದಕದೊಳಾಡುವನು
ಸಣ್ಣ ಮೋರೆಯ ಮಾಡಿ ಬಗ್ಗುವನು
ಮಣ್ಣಕೆದರುತ ಕ್ರೋಡಾಗಿ ತಾನು
ಚಿನ್ನಸುರ ಎಲ್ಲೆ ಕರುಳ್ಹಾರ್ಹಾಕುವನು 1
ತಿರುಕನಂದದಿ ಬೇಡಿಕೊಂಬುವನೊ
ಗುರುತದಾರದರಿಯ ತಾಯ್ಹಂತಕನು
ದೊರೆತನವ ಬಿಟ್ಟಡವಿಲಿರುವವನು
ಶರತಮಾಡಿ ಮಾತುಳನ ಕೊಲ್ಲುವನು 2
ಬËದ್ಧರೂಪದಿ ಲಜ್ಜೆಗೆಡಿಸುವನು
ಎದ್ದು ತುರುಗನೇರ್ಯೋಡಿ ಪೋಗುವನು
ಕದ್ದು ಬೆಣ್ಣೆಯ ಮೆಲ್ಲುವ ತಾನು
ಮುದ್ದು ಭೀಮೇಶಕೃಷ್ಣ ಎಲ್ಲಿಹನು 3
****