ನಿನ್ನ ನಾಮವಿದ್ದರೆ ಸಾಕೊ ll ಪ ll
ಮುನಿದರೆ ಮುನಿ ನಿನ್ನಾಣೆ ಶ್ರೀರಾಮ ll ಅ ಪ ll
ಹೊದ್ದಿದ ಪಾಪವನೆಲ್ಲ l ಛಿನ್ನ ಛಿದ್ರವ ಮಾಡಿ ಖಂಡಿಸಿ ಬಿಡುವ ll
ಎದ್ದರೆ ಸಂಗಡ ಬರುವ l ಎನ್ನ
ಮುದ್ದಿಸಿ ಮುಂದಕೆ ಮುಕ್ತಿಯ ಕೊಡುವ ll 1 ll
ಸಾರೆ ಸಂಗಡ ಬರುವ l ಎನ್ನ
ಸೇರಿದ ಪಾಪವ ಕೋಪದಿ ತರಿವ ll
ಝಾಡಿಸಿ ಕರ್ಮವ ಕಳೆವ l ಎನ್ನ
ಕೂಡಿಕೊಂಡು ವೈಕುಂಠಕ್ಕೆ ನಡೆವ ll 2 ll
ಪರಮಾನಂದವನೀವ l ನಿನ್ನ
ಸ್ಮರಣಯೆಂಬುದು ಎನ್ನ ಜೀವಕ್ಕೆ ಜೀವ ll
ವರವ ಕೊಡುವುದೊಂದು ಭಾವ l ಈ
ಪರಿ ಪುಸಿಯಲ್ಲ ಶ್ರೀ ಪುರಂದರವಿಟ್ಠಲ ll 3 ll
*****
ರಾಗ - ಪಂತುವರಾಳಿ ತಾಳ - ಅಟ್ಟತಾಳ (raga, taala may differ in audio)
ರಾಗ ಪಂತುವರಾಳಿ/ಕಾಮವರ್ಧನಿ ಅಟ ತಾಳ
***
pallavi
ninna nAmaviddare sAkO
anupallavi
munidare muni ninnANe shrI rAma
caraNam 1
hoddida pApavanella chinna chitrava mADi khaNDisi biDuva
eddare sankaTa baruva enna muddisi mundake muktiya koDuva
caraNam 2
sAre sankaTa baruva enna sErida pApava gOpati tariva
jhADisi karmava kaLeva enna kUDi koNDu vaikuNThakke naDeva
caraNam 3
paramAnandanIva ninna smaraNeyembudu enna jIvakke jIva
vara koDuvudondu bhAva I pari pusiyalla purandara viTTala
***
pallavi
ninna nAma ondE sAku
anupallavi
nI munidare muni ninnANe rAmaninna nAma ondE sAku
caraNam
paramAnandavIva ninna smaraNeyembudu enna jIvakke jIva
Varava koDuvudondu bhava endu pusiyalla hari enna purandara viTTala
***
ನಿನ್ನ ನಾಮವಿದ್ದರೆ ಸಾಕೋ ||ಪ||
ನಿನ್ನ ನಾಮವಿದ್ದರೆ ಸಾಕೋ ||ಪ||
ಮುನಿದರೆ ಮುನಿ ನಿನ್ನಾಣೆ ಶ್ರೀ ರಾಮ ||ಅ||
ಹೊದ್ದಿದ ಪಾಪವನೆಲ್ಲ ಛಿನ್ನಚಿದ್ರವ ಮಾಡಿ ಖಂಡಿಸಿ ಬಿಡುವ
ಎದ್ದರೆ ಸಂಕಟ ಬರುವ ಎನ್ನ ಮುದ್ದಿಸಿ ಮುಂದಕೆ ಮುಕ್ತಿಯ ಕೊಡುವ ||
ಸಾರೆ ಸಂಗಡ ಬರುವ ಎನ್ನ ಸೇರಿದ ಪಾಪವ ಕೋಪದಿ ತರಿವ
ಝಾಡಿಸಿ ಕರ್ಮವ ಕಳೆವ ಎನ್ನ ಕೂಡಿಕೊಂಡು ವೈಕುಂಠಕ್ಕೆ ನಡೆವ ||
ಪರಮಾನಂದನೀವ ನಿನ್ನ ಸ್ಮರಣೆಯೆಂಬುದು ಎನ್ನ ಜೀವಕ್ಕೆ ಜೀವ
ವರ ಕೊಡುವುದೊಂದು ಭಾವ ಈ ಪರಿ ಪುಸಿಯಲ್ಲ ಪುರಂದರವಿಠಲ ||
********