Showing posts with label ಕೋಲ ಕೋಲೆನ್ನ ಕೋಲ ಕೋಲ ಕೋಲೆನ್ನ ಕೋಲಕೋಲೆಂದು ಪಾಡು ramesha. Show all posts
Showing posts with label ಕೋಲ ಕೋಲೆನ್ನ ಕೋಲ ಕೋಲ ಕೋಲೆನ್ನ ಕೋಲಕೋಲೆಂದು ಪಾಡು ramesha. Show all posts

Wednesday, 4 August 2021

ಕೋಲ ಕೋಲೆನ್ನ ಕೋಲ ಕೋಲ ಕೋಲೆನ್ನ ಕೋಲಕೋಲೆಂದು ಪಾಡು ankita ramesha

 ..

ಕೋಲ ಕೋಲೆನ್ನ ಕೋಲ ಕೋಲ ಕೋಲೆನ್ನ ಕೋಲಕೋಲೆಂದು ಪಾಡುವರೆಷ್ಟು ಕೇಳ ವಯ್ಯಾರಿ ಪ.

ಚಿತ್ರ ವಿಚಿತ್ರದ ಮುತ್ತು ಮಾಣಿಕ ಎಸವೋಛತ್ರÀ ಹಿಡಿದವರೆಷ್ಟ ಕೇಳ ವೈಯಾರಿ 1

ವೀತ-ದೋಷನ ಮುಂದೆ ಶ್ವೇತ ಛತ್ರವುಕೋಟಿ ಪ್ರೀತಿಲಿ ಹಿಡಿದವರೆಷ್ಟ ಕೇಳವಯ್ಯಾರಿ2

ಸೂರ್ಯ ಮಂಡಲಕೊಪ್ಪೊ ಸೂರ್ಯ ಪಾನವುಕೋಟಿಸಾರೆ ಹಿಡಿದವರೆಷ್ಟ ಕೇಳ ವಯ್ಯಾರಿ3

ಎಡಬಲ ಚಾಮರ ಹಿಡಿಕೆ ನವರತ್ನ ಹೊಳೆವ ಹಿಡಿದು ಬೀಸುವರವರೆಷ್ಟ ಕೇಳ ವಯ್ಯಾರಿ 4

ರತ್ನ ಮಾಣಿಕ ಬಿಗಿದ ಬೀಸಣಿಕೆಯ ಹಿಡಿದುಚೆನ್ನಾಗಿ ಬೀಸುವವರೆಷ್ಟ ಕೇಳ ವಯ್ಯಾರಿ 5

ಚಲುವ ರಂಗನ ಮುಂದೆ ನಲಿಯುತ ನವಿಲಗÀರಿಯಸುಳಿಸುವವರೆಷ್ಟ ಕೇಳ ವಯ್ಯಾರಿ 6

ಅಚ್ಚ ಜರತಾರಿ ವಸ್ತ್ರ ಜತ್ತಾಗಿ ನಿರಿ ಹೊಯ್ದುಬಿಚ್ಚಿಹಾರಿಸುವರೆಷ್ಟ ಕೇಳ ವೈಯ್ಯಾರಿ 7

ಫುಲ್ಲನಾಭನ ಮುಂದೆ ಮಲ್ಲ ಮುಷ್ಠಿಕರುತಮ್ಮೆಲ್ಲವಿದ್ಯೆಯನು ತೋರಿಸುವರೆಷ್ಟ ಕೇಳ ವೈಯಾರಿ 8

ಬಂದಿಗಳು ರಾಮೇಶನ ಒಂದೊಂದು ಗುಣ ರಚಿಸಿಚಂದಾಗಿ ಹೊಗಳುವರೆಷ್ಟ ಕೇಳ ವೈಯ್ಯಾರಿ9

****