ಕಾಖಂಡಕಿ ಶ್ರೀ ಕೃಷ್ಣದಾಸರು
ಇಂದು ಸಲಹಿದೇ ಇಂದು ಸಲಹಿದೇ ಆರ್ತರ ಬಂಧು ಸಿಂಧು ಪ
ಅಂದು ಪ್ರಲ್ಹಾದ ನೆಂಬುಧಿಯೊಳಗ ಬಂದು ಉಳುಹಿದ ತರದಿಂದಲೆನಗೆ 1
ಹಿಂದ ಪ್ರಳಯ ಜಲದಿ ಸತ್ಯ ವ್ರತನಾ ಪರಿ ಸಿರಿರಮಣಾ2
ಕುದಿ ವೆಣ್ಣೆ ಗೊಪ್ಪರಿಗೆಯೋಳಿಹ ಸುಧನ್ವನಾ ಪ್ರಾಣನುಳಹಿದ ಪರಿಯಾ3
ತಂದೆ ಮಹಿಪತಿ ಪ್ರಭು ದತ್ತಾತ್ರೆಯಾ ಬಂದದುರಿತದಿ ಬಿಡಿಸುತ ಕಾವಾ 4
***