Showing posts with label ಕೇಳು ಮನವೇ ನೀನು ಅನವರತಾ ಬಾಳು ಹಿರಿಯ ನಂಬಿರು ತಾ mahipati. Show all posts
Showing posts with label ಕೇಳು ಮನವೇ ನೀನು ಅನವರತಾ ಬಾಳು ಹಿರಿಯ ನಂಬಿರು ತಾ mahipati. Show all posts

Wednesday, 1 September 2021

ಕೇಳು ಮನವೇ ನೀನು ಅನವರತಾ ಬಾಳು ಹಿರಿಯ ನಂಬಿರು ತಾ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಕೇಳು ಮನವೇ ನೀನು | ಅನವರತಾ | ಬಾಳು ಹಿರಿಯ ನಂಬಿರು ತಾ ಪ 

ಸದ್ಗುರು ದಯ ಪಡೆದು | ಭವದಲಿ ಪಡಿ ಭಾಗ್ಯದಲಿ 1 

ಹಲವು ಹಂಬಲ ತ್ಯಜಿಸಿ | ದೃಢದಿಂದ | ಬಲಗೊಳ್ಳುಗುರು ಪದದ್ವಂದ್ವ 2 

ಉದರ ಕುದಿಯಗಾಗಿ | ಕಂಡವನಾ | ವದಕೆರಗಲು ಬಹದೇನಾ 3 

ಇಂದು ಸುಖಿಸು ಹೊಂದಿ ಕೃಷ್ಣಯ್ಯನ | ಸನ್ನುತ ಮಹಿಪತಿ ಚರಣಾ 4

***