Showing posts with label ಏನು ಪೇಳಲಿ ನಿನ್ನ ಆಗಮವನು gurugopala vittala ENA PELALI NINNA AAGAMANAVANU. Show all posts
Showing posts with label ಏನು ಪೇಳಲಿ ನಿನ್ನ ಆಗಮವನು gurugopala vittala ENA PELALI NINNA AAGAMANAVANU. Show all posts

Monday, 21 June 2021

ಏನು ಪೇಳಲಿ ನಿನ್ನ ಆಗಮವನು ankita gurugopala vittala ENA PELALI NINNA AAGAMANAVANU

Audio by Vidwan Sumukh Moudgalya


ಶ್ರೀ ಗುರುಗೋಪಾಲದಾಸರ ಕೃತಿ


 ರಾಗ : ದೇಶ     ಖಂಡಛಾಪು


ಏನು ಪೇಳಲಿ ನಿನ್ನ ಆಗಮವನು

ಆನಂದಮಯ ಭುವನ ಪಾವನ ದಿವಿಜಗಂಗೆ ॥ಪ॥


ಮೊದಲು ನೀ ಹಿರಣ್ಯಹರಣಂಘ್ರಿಯಿಂದುದುಭವಿಸಿ

ತದನಂತರದಿ ಸುರರಾಧಿ ತನ್ನ

ಉದಕಪಾತ್ರೆಯಲಿದ್ದು ಆತಕರದಿಜರಿದು

ಮುದದಿಂದ ಬ್ರಹ್ಮಾಘತನಯಶಿರಕಿಳಿದೆ॥೧॥


ಗುರುತಲ್ಪಕನ್ನ ಸಂಯೋಗವನುಮಾಡಿ ನೀ

ಗರಳಕಂಧರನ ಜಢೆಯಿಂದಲಿಳಿದು 

ಧರೆಯೊಳಗೆ ಕಪಿಲದ್ರೋಹಿಗಳ ಸ್ಪರುಷವ ಮಾಡಿ

ಹರುಷದಲಿ ಜಲಧಿ ಸಂಗವ ಮಾಡಿದೆಲೆದೇವಿ॥೨॥


ಪತಿತ ಜಡಮತಿ ಕುಗತಿಗಳ ನೋಡಿದಿದದರಿಂದ ನೀ

ಪತಿತಳಾದೆ ಜಡ ಕುಗತಿಯೈದಿದೆ

ಕ್ಷಿತಿಯೊಳಗೆ ಅವರು ನಿನ್ನನು ನೋಡಿದಾಕ್ಷಣಕೆ

ಅತಿ ಪಾವನತ್ವ ಸುಗತಿ ಸುಮತಿಯ ಪಡೆದರು॥೩॥


ಈ ಪರಿಯು ನಾ ನಿನ್ನ ತುತಿಸೆನ್ನ ಪಂಚಮಹಾ

ಪಾಪ ಪತಿತತ್ವ ಜಡಮತಿ ಕುಗತಿಯು

ಅಪಾರ ದೋಷಗಳು ಕಳೆದು ನಿನ್ನೊಲಿಮೆಯಲಿ

ಶ್ರೀಪತಿಯ ಒಲಿಸುವದಕ್ಕೆ ಅಧಿಕಾರಿ ನಾನಾದೆ॥೪॥


ಭಾಗೀರಥಿ ಎಂದು ನಾ ನಿನ್ನ ಸ್ಮರಿಸಿದರೆ

ಈಗ ಭವನಾಶಿಯು ಎನಗಾದೆ ನೀ

ಯೋಗ ಪ್ರಭಾವಕ್ಕೆ ಎಣೆಗಾಣೆ ನಮೋ ನಮೋ

ಶ್ರೀಗುರುಗೋಪಾಲವಿಟ್ಠಲನ್ನ ಪ್ರಿಯಸುತೆ॥೫॥

****

ನಮಾಮಿ ಗಂಗೇ ತವ ಪಾದಪಾದ ಪಂಕಜಂ

ಸುರಾಸುರೈರ್ವಂದಿತ ದಿವ್ಯರೂಪಮ್।

ಭುಕ್ತಿಂ ಚ ಮುಕ್ತಿಂ ಚ ದದಾಸಿ ನಿತ್ಯಂ

ಭಾವಾನುಸಾರೇಣ ಸದಾ ನರಾಣಾಮ್॥

****