Showing posts with label ನಾಮವೆ ನೆನೆಯೋದು vijaya vittala suladi ಹರಿನಾಮ ಮಹಿಮ ಸುಳಾದಿ NAAMAVE NENEYODU HARINAMA MAHIMA SULADI. Show all posts
Showing posts with label ನಾಮವೆ ನೆನೆಯೋದು vijaya vittala suladi ಹರಿನಾಮ ಮಹಿಮ ಸುಳಾದಿ NAAMAVE NENEYODU HARINAMA MAHIMA SULADI. Show all posts

Sunday 8 December 2019

ನಾಮವೆ ನೆನೆಯೋದು vijaya vittala suladi ಹರಿನಾಮ ಮಹಿಮ ಸುಳಾದಿ NAAMAVE NENEYODU HARINAMA MAHIMA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ಕೃತ  ಹರಿನಾಮ ಮಹಿಮ ಸುಳಾದಿ 

 ರಾಗ ತೋಡಿ 

 ಧ್ರುವತಾಳ 

ನಾಮವೆ ನೆನೆಯೋದು ನಾಮಧಾರಿಯಾಗಿ
ನೇಮವ ಬಿಡದೇಕಾಮೇವ ಹರಿಯೆಂದು
ಕಾಮ ಕ್ರೋಧ ಮತ್ಸರಾದಿ ಮರಿಯಾದಿಗಳ
ನೀ ಮರೆದು ನಿತ್ಯ ರೋಮಾಂಚನದಿಂದ
ತಾಮಸ ಗುಣಗಳ ಕಾಮಿಸದಲೆ ನಿ
ಷ್ಠಾಮದಲ್ಲಿ ಬಾಷ್ಪೋದಕ ಸುರಿಸುತ್ತ
ಶ್ರೀ ಮಾರುತನ ಮತದ ಮಹೋದಧಿಯೊಳು
ಉತ್ತಮ ಮನಸಿನಲ್ಲಿ ಶ್ರೀ ಮುದ್ರಿಯನ್ನೆ ಧರಿಸಿ
ಕೋಮಲ ನೀನಾಗಿ ತುಲಸಿ ಮಾಲಿಕೆಯಿಂದ 
ಶ್ರೀರಮಣ ವಿಜಯವಿಠ್ಠಲ ಸರ್ವ
ಸ್ವಾಮಿಯ ಒಂದೆ ಸಾರಿ ನಾಮವೆ ನೆನೆವದು ॥ 1 ॥

 ಮಟ್ಟತಾಳ 

ಕೃತಯುಗದೊಳಗೆ ಅಪರಿಮಿತ ಧ್ಯಾನವನ್ನು
ಮಿತಿ ಇಲ್ಲದಂತೆ ಸತತ ಮಾಡಿದರನ್ನ
ತ್ರೇತಾಯುಗದೊಳಗುನ್ನತ ದಾನದಿಂದ
ಅತಿಶಯವಾಗಿ ಸಮ್ಮತವೆನಿಸಿದರನ್ನ
ಚತುರ ದ್ವಾಪರದಲ್ಲಿ ಪ್ರತಿದಿನ ಬಿಡದಲೆ
ಹಿತವಾಗಿ ಕರ್ಮ ಪ್ರತಿ ಇಲ್ಲದಲೆ ಮಾಡೆ
ಗತಿಗೆ ಸಾಧನವಲ್ಲ ಪ್ರತಿಕೂಲವಲ್ಲದಲೆ
ಮತಿವಂತರ ಪ್ರೀಯ ವಿಜಯವಿಠ್ಠಲನ್ನ 
ಕಥನಾ ನಾಮಾಮೃತಕ್ಕೆ ಪ್ರತಿಗಾಣೆ ಕಲಿಯುಗದಿ ॥ 2 ॥

 ತ್ರಿವಿಡಿತಾಳ 

ಧ್ಯಾನಮಾಡುವೆನೆನಲು ಹೀನವಲ್ಲದೆ ಮನಸು
ತಾ ನಿಲ್ಲದು ಒಂದು ಕ್ಷಣವಾದರು
ದಾನಮಾಡುವೆನೆ ನಿದಾನಿಸಲು ದ್ರವ್ಯ
ಏನೇನು ಶುಚಿಯಿಲ್ಲ ಅನಂತ ಕಾಲಕ್ಕು
ಆನಂದದಿಂದಲಿ ಭಾನು ಉದಯಾಸ್ತ
ಮಾನ ಪರಿಯಂತ ಮಾಣದಲೆ ಕರ್ಮ
ಜಾಣತನದಿಂದಲಿ ತಾನೆಸಗಿದರು
ಕ್ಷೀಣವಲ್ಲದೆ ಇದು ಪೂರ್ಣವಿಲ್ಲ
ಧ್ಯಾನ ದಾನ ಕರ್ಮವನು ಕೈಕೊಂಡರು
ಆನಂದವಾದ ಸೋಪಾನಕ್ಕೆ ಪಥವಲ್ಲ
ಶ್ರೀನಾಥ ವಿಜಯವಿಠ್ಠಲನ ನಾಮಕ್ಕೆ
ಕಾಣೆನೊ ಪ್ರತಿಕಕ್ಷಿ ಆವ ಕರ್ಮಾದಿಯಲಿ ॥ 3 ॥

 ಅಟ್ಟತಾಳ 

ಧ್ಯಾನ ದಾನ ಕರ್ಮ ಏನೇನು ಮಾಡಲು
ಊನವಲ್ಲದೆ ಸಂಪೂರ್ಣವಾಗದು ಕಾಣೋ
ಕ್ಷೋಣಿಯೊಳಗೆ ಸಮಾನವಿಲ್ಲದ ನಾಮ
ದೀನನಾಗಿ ನಿಂದು ದಿನಕೊಮ್ಮೆ ನೆನೆದಡೆ
ಧ್ಯಾನ ದಾನ ಕರ್ಮ ಆವಾವಕಾಲಕ್ಕೆ
ತಾನೆಸಗಿದ ಫಲಕೆ ನೂರು ಮಡಿ ಉಂಟು
ದಾನವಾಂತಕ ರಂಗ ವಿಜಯವಿಠ್ಠಲನ್ನ 
ಚೂಣಿಗೆ ನೆನೆಸಲು ಮಾಣದಲೆ ಗತಿ ॥ 4 ॥

 ಆದಿತಾಳ 

ಆವ ಸವಿಯೋ ಆವ ರುಚಿಯೋ
ಆವ ಆನಂದವೋ ಆವ ರಸವೋ
ಆವ ಸೌಖ್ಯವೋ ಆವ ಮೋಹವೋ
ಆವ ಹಿತವೋ ಆವ ಕುರುಹವೋ
ಆವ ಮಹತ್ತವೋ ಆವ ಅಣುವೋ
ಆವ ಚಂದವೋ ಆವ ತರವೋ
ಆವ ಧೇನುವೋ ಆವ ರಸವೊ
ಆವ ಮೂಲವೋ ಆವ ವರ್ನವೋ
ಆವದೋ ಶ್ರೀ ಹರಿಯ ನಾಮಾ 
ಪಾವನವಾದ ಮಹಿಮೆ
ಶ್ರೀ ವಿಭುವೇ ವಿಜಯವಿಠ್ಠಲ 
ದೇವನಂಘ್ರಿ ನಂಬು ಮನವೆ ॥ 5 ॥

 ಜತೆ 

ನಾಮದಿಂದಾದ ಗತಿ ಮಿಕ್ಕಾವದರಿಂದಿಲ್ಲಾ
ರಾಮ ನಾಮ ನೆನೆಯೋ ವಿಜಯವಿಠ್ಠಲರೇಯನ ॥
*********