ಜಯದೇವ ಜಯದೇವ ಜಯ ವಾಸುದೇವ ಭಾಸುವ ಭಾಸ್ಕರಕೋಟಿತೇಜನ ಮನದೈವ ಪ
ಪ್ರಾರ್ಥಿಸುವದರ್ತಿ ಆರ್ಥಿಯ ಘನ ಸ್ಫೂರ್ತಿ ಸ್ಪೂರ್ತಿಗೆ ಸುಸ್ಥಾನಾಗಿಹ ನೀ ಘನಗುರು ಮೂರ್ತಿ ಮೂರ್ತಿ ನಿಮ್ಮ ಕೀರ್ತಿ ಬೆಳಗುದು ಭಾವಾರ್ತಿ ಅರ್ತಿ ಬೆಳಗುವ ಕಂಗಳಿಗ್ಯಾಗಿಹ ನೀ ಸಾರ್ಥಿ 1
ಸುಗುಣ ನಿರ್ಗುಣ ನೀನೆ ಪರಿಪೂರ್ಣ ಯೋಗಿಯ ಮಾನಸಹಂಸನಾಗುವೆ ನೀ ಪೂರ್ಣ ಬಗೆ ಬಗೆ ಭಾಸುವ ಭಕ್ತವತ್ಸಲ ಗುಣ ಸುಗಮಾಗೂದಕೆ ನಿಮ್ಮ ದಯ ಆಧಿಷ್ಠಾನ 2
ಮುನಿಜನಕಾಗುವ ಖೂನ ಸ್ವಾನುಭದ ಜ್ಞಾನ ಸನಕ ಸನಂದನ ವಂದಿತ ನೀನೆ ಅನುದಿನ ಘನಸುಖದಾಯಕ ಸದ್ಗುರು ನೀ ನಿಧಾನ ದೀನ ಮಹಿಪತಿ ಸ್ವಾಮಿ ನೀ ಸನಾತನ 3
***