Showing posts with label ವಿಜಯರಾಯ ಭಜಿಸೋ karpara narakesari vijaya dasa stutih. Show all posts
Showing posts with label ವಿಜಯರಾಯ ಭಜಿಸೋ karpara narakesari vijaya dasa stutih. Show all posts

Thursday, 26 December 2019

ವಿಜಯರಾಯ ಭಜಿಸೋ ankita karpara narakesari vijaya dasa stutih

ವಿಜಯರಾಯ ಭಜಿಸೋ ಹೇ ಮನುಜಾ ನೀ ||pa||

ವಿಜಯರಾಯರ ಪಾದ ಭಜಿಸುವ ಮನುಜರ
ವೃಜಿನ ವಾರಿಧಿಗೆ ಕುಂಭಜರೆನಿಸಿದ ಗುರು ||a.pa||

ಮೊದಲು ಬೃಗುಮುನಿರೂಪದಿ ಶೀ-
ಘ್ರದಿ ಪೋಗಿ ಬರಲು ಶ್ರೀಹರಿ ಲೋ-
ಕದಿ ವಿಧಿ ವಿಷ್ಣು ಶಿವರೊಳು
ಪದುಮನಾಭನಕಿಂತ ಅಧಿಕರಿಲ್ಲೆಂದು ನಾ
ರದ ಮುನಿಗರುಹಿದ ||1||

ಜಗದೊಳು ಸಕಲ ಕ್ಷೇತ್ರ ತೀರ್ಥಗಳ
ಮಹಿಮೆಯ ವರ್ಣಿಸುತ ಖಗರಾಜ
ಗಮನ ಶ್ರೀ ಭಗವದ್ಗುಣಗಳನ್ನು
ಬಗೆ ಬಗೆ ಪದಸುಳಾದಿಗಳಿಂದ ತುತಿಸಿದ ||2||

ಕಾಶಿಯೊಳಗೆ ಸಂಪ್ರಾಪ್ತ ಪುರಂದರ
ದಾಸರಿಂದಲಿ ಅಂಕಿತ
ಶೇಷಶಯನ ಶ್ರೀನಿವಾಸ ‘ಕಾರ್ಪರನರ-
ಕೇಸರಿ ‘ ಗತಿ ಪ್ರಿಯ ದಾಸರೆಂದೆನಿಸಿದ ||3||
*******