Showing posts with label ವರಗುರುವರ್ಯ ಶ್ರೀ prasannashreenivasa brahmanya teertha stutih. Show all posts
Showing posts with label ವರಗುರುವರ್ಯ ಶ್ರೀ prasannashreenivasa brahmanya teertha stutih. Show all posts

Friday, 27 December 2019

ವರಗುರುವರ್ಯ ಶ್ರೀ ಬ್ರಹ್ಮಣ್ಯ ankita prasannashreenivasa brahmanya teertha stutih

ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಬ್ರಹ್ಮಣ್ಯ ತೀರ್ಥ ಗುರುಗಳ ಸ್ತೋತ್ರ

ವರಗುರುವರ್ಯ ಶ್ರೀ ಬ್ರಹ್ಮಣ್ಯತೀರ್ಥರ |ಚರಣಕಮಲಕೆ ನಾಅನುದಿನನಮಿಪೆ 

ಪರಿಪರಿ ದುರಿತವ ತ್ವರಿತದಿ ತರಿದು ಶ್ರೀ |ಹರಿಮಧ್ವ ಚರಣಂಗಳಲಿ ಭಕ್ತಿ ಕೊಡುವಂತೆ ಅ ಪ

ವರಮಧ್ವಮುನಿ ಹೃಸ್ಥ ನರಹರಿ ಶ್ರೀಕೃಷ್ಣ |ಕರಗಳ ಕಟಿಯಲಿಟ್ಟಿರುವ ವಿಠಲರಾಯ ||ವರವೇದವ್ಯಾಸ ವರಾಹನರ್ಚಕರಾದ |ವರಪುರುಷೋತ್ತಮ ಮುನಿಕರ ಕಮಲಜ1

ವಿಪ್ರವೃದ್ಧರಿಗೆ ಇವರು ದಯವನ್ನು ಬೀರಿ |ಪುತ್ರ ಭಾಗ್ಯವನಿತ್ತು ಆ ವ್ಯಾಸ ಮುನಿಯನು ||ಸುಪ್ರಖ್ಯಾತರ ಮಾಡಿದಂಥ ಪ್ರಸಿದ್ಧರೀ - |ಸುಪ್ರಬುದ್ಧರ ಮಹಿಮೆಯು ಜ್ವಲಿಪುದು ಎಲ್ಲೂ 2

ಪರಮದಯದಿ ಎನ್ನ ಕಷ್ಟದುರಿತ ಕೀಳ್ತು |ಪರಮಸದ್ಗುರುವರ್ಯರೆ ಪೊರೆಯಿರಿ ಎನ್ನ ||ಸರಸಿಜೋದ್ಭವತಾತ' ಪ್ರಸನ್ನ ಶ್ರೀನಿವಾಸ &ಡಿsquo;ವರಕಾಂತಿಯಿಂ ಪ್ರಜ್ವಲಿಸುತಿಹ ನಿಮ್ಮೊಳು3 ಪ
*******