ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರವ್ವ ಜಗದಂಬೆ ಶರಣೆಂದು ಬಲಗೊಂಬೆ | ಪಾದ ಪದ್ಮ ಪೂಜೆಗೊಳೆ ಸುಖದಿಂಬೆ ಪ
ಕೈವಲ್ಯ - ಗತಿ - ದಾಯಿ ಮೂರು ಲೋಕದಾ ತಾಯೀ ಆವಾಗ ನೆನೆವೆ ನಿಮ್ಮ ಅರ್ಥಿಯಿಂದಾತುಕೊ ಬಾಯೀ 1
ಅಷ್ಟದಳ ಗದ್ದುಗೆಯಲಿ ಭಕ್ತಿರಂಗ ಹಾಕಿರಲೀ ಇಷ್ಟೇನು ಜ್ಞಾನದೀಪಾ ಕಟ್ಟಿ ನಿಜದ್ಯಾಸ ಮಾಲೀ2
ವೇದಶಾಸ್ತ್ರಗಳಿಗೆ ಮುನ್ನೆ ಮಹಿಮೆ ತಿಳಿಯದು ಪ್ರಸನ್ನೆ ಸುರರು ನಮೋ ಎನ್ನೆ3
ಅನುವಾಗಿ ನಾಮ ಪಾಡಿ ಗೊಂದಲ್ಹಾ ಕುವೆನುಛಂಧಾ4 ಕೊಂಡಾಡುತಿಹೆ ನಿನ್ನ ಗುರು ಮಹಿಪತಿಜನಾ ಮಂಡಿಮ್ಯಾಲ ಕೈಯನಿಟ್ಟು ಪಾಲಿಸೇ ಅನುದಿನಾ5
***