Showing posts with label ಒಡವೆಯ ನೀಡಬಾರದೆ ಬಾಲೆಯರೆಲ್ಲ venkatakrishna. Show all posts
Showing posts with label ಒಡವೆಯ ನೀಡಬಾರದೆ ಬಾಲೆಯರೆಲ್ಲ venkatakrishna. Show all posts

Tuesday, 1 June 2021

ಒಡವೆಯ ನೀಡಬಾರದೆ ಬಾಲೆಯರೆಲ್ಲ ankita venkatakrishna

 by yadugiriyamma

ಒಡವೆಯ ನೀಡಬಾರದೆ ಬಾಲೆಯರೆಲ್ಲ ಒಡವೇಯ ನೀಡಬಾರದೆ ಪ


ಒಡವೆಯನಿಟ್ಟರೆ ವೇಳ್ಯೆಕ್ಕೊದಗುವುದು

ಒಡಲೀಗೆ ಒದಗಾದು ಕಳ್ಳರು ಕದಿವರು ಅ.ಪ


ಇದು ಬಹಳ ಬೆಲೆಯು ಬಾಳುವ

ಹನ್ನೆರಡು ಹರಳಿನ ವಾಲೆ ಹದಿನೆಂಟುಸಾವಿರಮುತ್ತಿನಸರಪಳಿ

ಚಂಪಸರಗಳುಂಟು ಚಂದದವಾಲೆಗೆ 1


ಆಣಿಮುತ್ತುಗಳಾರಿಸಿ ಅದರಲ್ಲಿ

ಏಳು ಕಳಸ ಬಿಗಿದು ಇಪ್ಪತ್ತುನಾಲ್ಕುಸಾವಿರಮುತ್ತಿನ ಗೊಂಚಲು

ಸುತ್ತಿದೆ ಮುತ್ತಿನ ಬುಗುಡೀಗೆ 2


ಕತ್ತರಿಬಾವುಲಿಯು ಅದರ ಬೆಲೆ ಹತ್ತು ಲಕ್ಷವು ಬಾಳುವದು ಅದಕೆ

ಸುತ್ತಿದೆ ಆಣಿಮುತ್ತುಗಳ್ಹದಿನೆಂಟು

ಎತ್ತಿ ಕಟ್ಟುವರೇ ಸರ್ಪಣಿಗಳುವುಂಟು 3


ಮುತ್ತಿನಲಿ ಹದಿನೆಂಟು ಆರಿಸಿ ತೆಗೆದು

ಹಾರತುರಾಯನಿಟ್ಟು ಮೂರು ಮುತ್ತಿನಲಿ ಜುಳುಜುಳಿಗಳ

ಸುತ್ತಿ ಮುಕುರವನಿಟ್ಟಾರೆ ಮುದ್ದಾಗಿತೋರ್ವದು 4


ಕೊರಳಿನೊಳಗೆ ಒಪ್ಪುವ ಹಾರದ ಬೆಲೆ

ಆರುಸಾವಿರ ಬಾಳುವುದು ಟಂಠಳ್ಳಿಸುವ ಎಂಟುರತ್ನದ ಪದಕವು

ಕಂಠದೊಳಿದ್ದರೆ ವೆಂಕಟನತೋರ್ಪುದು 5

****