ತೆರಳಿದ ನಮ್ಮರಂಗ ಅರಳುಮಲ್ಲಿಗೆ ಹೂವತರುಳೆ ಸೂರ್ಯಾಡಿ ಬಾರೆ ಪ.
ರಾಜ ರಾಜರು ಸಹಿತ ಭೋಜನ ಮಾಡಿ ಕೃಷ್ಣರಾಜ ಗೋಪಾಲನೀಗ ತೆರಳಿದ 1
ಅಂಬುಜಾಕ್ಷನು ದಿವ್ಯ ತಾಂಬೂಲಹಾಕಿಕೊಂಡು ಕಂಬು ಕಂದರನೀಗ ತೆರಳಿದ 2
ಇಂದಿರೇಶ ತಾನು ಚಂದ್ರ ಸಾಲಿಗ ಳಿಳಿದು ತಂದಿ ಭಕ್ತರ ಮನೆಗೆ ತೆರಳಿದ3
ಪ್ರೇಮದಿ ಕೃಷ್ಣರಾಯ ಸೋಮ ಸಾಲಿಗ ಳಿಳಿದು ಸ್ವಾಮಿ ಭಕ್ತರ ಮನೆಗೆ ತೆರಳಿದ 4
ಕುಂತಿ ದೇವಿಯರ ಪುಣ್ಯ ಎಂತು ವರ್ಣಿಸಬೇಕು ಶ್ರೀಕಾಂತನು ಅವರ ಅರಮನೆಗೆ ತೆರಳಿದ5
ಮತ್ತೆಪಾಂಡವರ ಪುಣ್ಯ ವಿಸ್ತರಿಸಲೊಶವಲ್ಲಚಿತ್ತಜನೈಯನೀಗ ತೆರಳಿದ6
ಪಕ್ಷಿವಾಹನ ಸ್ವಾಮಿ ಲಕ್ಷರೂಪವೆ ಧರಿಸಿ ಲಕ್ಷ್ಮಿರಮಣ ನೀಗ ತೆರಳಿದ 7
ಹಾಟಗಾಂಬರ ಧಾರಿ ಕೋಟಿ ರೂಪದಿ ಜಗನ್ನಾಟಕ ಕೃಷ್ಣನೀಗ ತೆರಳಿದ 8
ಚನ್ನರಾಮೇಶ ತಾನು ಅನಂತ ರೂಪವಧರಿಸಿತನ್ನ ಭಕ್ತರ ಮನೆಗೆ ತೆರಳಿದ 9
***