ವಾಣಿನಾಥ ನಿನ್ನ ಮಹಿಮೆಕ್ಷೋಣಿಯೊಳಗೆ ಪೊಗಳುವೆನು ಪ
ಶ್ರೀನಿವಾಸನಮಲ ಮುಖವಾಮಾನಸಾದಿ ತೋರಿಸೀಗ ಅ.ಪ.
ಹರಿಯ ನಾಭಿ ಕಮಲದಲ್ಲಿ ಧರಿಸಿ ತನುವ ತಪತಪೆಂದುಎರಡುವರ್ಣ ಕೇಳಿ ಚರಿಸೆಪರಮಪುರುಷನನ್ನು ಕಂಡೆ 1
ಸಣ್ಣಬಾಲ ನಾಮ ಹರಿಯತಿನ್ನಬೇಡ ನಿನಗೆ ಬಹಳಅನ್ನಮಾಡಿಕೊಡುವೆನೆಂದುಧನ್ಯ ಜಗವ ನಿರ್ಮಿಸಿದೆಯಾ 2
ಒಂದು ಕಾಲದಲ್ಲಿ ಹರಿಗೆನಿಂದ್ಯ ಕರ್ಮ ಮಾಡದಲೆಇಂದಿರೇಶ ನಿನ್ನ ಮನದಿಪೊಂದಿ ಭಜಿಪೆ ಪಾವನಾತ್ಮಾ 3
****