..
kruti by ಚಿಕ್ಕೋಡಿ ಆಚಾರ್ಯ sirivatsankitaru (chikkodi acharyaru)
ಸರಸಿಜನಯನಾ ಹೇ ಶ್ರೀನಿವಾಸ ಪ
ಸರಸಿಜಭವಪಿತ ಸರಸಿಜಾಕ್ಷಿಧವ
ಉರಗಶಯನ ನೀ ಉರಗಭೂಷಣವಂದ್ಯ ಅ.ಪ
ಮೂರುಲೋಕದೊಡೆಯನಾದವ ನೀನು
ತೋರೋ ನಿನ್ನ ಮಹಿಮೆಯಾ
ಗಾರುಗೊಂಡಿಹೆ ಪಾರವಾರದೊಳು
ತೋರಿ ನಿನ್ನಯ ಪದ ಸೇರಿಸುತಿರವ 1
ಬಾಲಕನ ಕಲಭಾಷೆಯ ಮಾತೆಯು ಬೇಗ
ಲಾಲಿಸುವ ತೆರದಿ ಪಾಲಿಸೆನ್ನಾ ಶ್ರೀಲಲಾಮ ನೀ
ಕುಲಲಾವರದನಾದಿ ನೀಲಮೇಘಶ್ಯಾಮಾ 2
ದಾನವಾಂತಕ ನೀನು ಶಿರಿವತ್ಸಾಂಕಿತ
ದೀನÀಜನರ ಸುರಧೇನು
ಏನು ತಪ್ಪಿದ್ದರೂ ನೀನು ಕ್ಷಮಿಸು ಇಂದು
ದೇನುವರರ್ಪಿಸಿದಿ ಪ್ರಾಣೇ±ವಂದಿತ 3
***