Showing posts with label ವರಗಳನು ಕೊಡುವುದು ವಾಸುಕಿಯ ಪ್ರಿಯಾ vijaya vittala. Show all posts
Showing posts with label ವರಗಳನು ಕೊಡುವುದು ವಾಸುಕಿಯ ಪ್ರಿಯಾ vijaya vittala. Show all posts

Wednesday, 16 October 2019

ವರಗಳನು ಕೊಡುವುದು ವಾಸುಕಿಯ ಪ್ರಿಯಾ ankita vijaya vittala

ವರಗಳನು ಕೊಡುವುದು ವಾಸುಕಿಯ ಪ್ರಿಯಾ ।
ಕರುಣದಿಂದಲಿ ಒಲಿದು ಕಂಡಮಾತುರದಲಿ ।। ಪ |।

ಇಂದ್ರ ಸಮಾನ ದೇವತೆಯೆ ರತಿಪತಿಯೇ ।
ಇಂದಿರೇಶನ ನಿಜ ಕುಮಾರ । ಮಾರ ।
ಒಂದು ಕಾಲದಲಿ ಸುಂದರನೆನಿಸಿಕೊಂಡಿರ್ದ ।
ಬಂಧುವೇ ಅಹಂಕಾರ ಪ್ರಾಣಗಿಂದಧಿಕನೇ ।। 1 ।।

ವನಜ ಸಂಭವನು ಸೃಷ್ಠಿ ಸೃಜಿಪಗೋಸುಗ ।
ಮನದಲ್ಲಿ ಪುಟ್ಟಿಸೆ ಚತುರ ಜನರ ।
ಮುನಿಗಳೊಳಗೆ ಸನತ್ಕುಮಾರನಾಗಿ ।
ಜನಿಸಿ ಯೋಗ ಮಾರ್ಗದಲ್ಲಿ ಚರಿಸಿದ ಕಾಮಾ ।। 2 ।।

ತಾರಕಾಸುರನೆಂಬ ಬಹು ದುರಳ ತನದಲಿ ।
ಗಾರು ಮಾಡುತಿರಲು ಸುರಗಣವನು ।
ಗೌರಿ ಮಹೇಶ್ವರರಿಗೆ ಮಗನಾಗಿ ಪುಟ್ಟಿ ।
ಧಾರುಣಿಯೊಳಗೆ ಸ್ಕಂಧ ನೆನಿಸಿದೆ ।।3 ।।

ರುಕ್ಮಿಣಿಯಲಿ ಜನಿಸಿ ಮತ್ಸ್ಯ ಉದರದಲಿ ।
ಪೊಕ್ಕು ಶಿಶುವಾಗಿ ಸತಿಯಿಂದ ಬೆಳೆದು ।
ರಕ್ಕಸ ಶಂಬರನೊಡನೆ ಕಾದು ಗೆದ್ದು ಮರಳಿ ।
ಚಕ್ಕನೆ ಸಾಂಬ ನೆನಿಸಿದೆ ಜಾಂಬವತಿಯಲ್ಲಿ ।। 4 ।।

ಜನಪ ದಶರಥನಲ್ಲಿ ಭರತನಾಗಿ ಪುಟ್ಟಿದೆ ।
ಮನೋ ವೈರಾಗ್ಯ ಚಕ್ರಾಭಿಮಾನಿ ।
ಯೆನಗೊಲಿದ ವಿಜಯವಿಠ್ಠಲರೇಯನಂಘ್ರಿ ।
ಅರ್ಚನೆ ಮಾಡುವ ಸುಬ್ರಹ್ಮಣ್ಯ ಬಲು ಧನ್ಯ ।। 5 ।।
***

pallavi

varagaLanu koDuvadu vAsukiyapriyA karuNadindali olivu kandAnAthuradalli

caraNam 1

indra samAna dEvateyE ratipatiyE indirEshana nija kumAra mAra
ondu kalpadali sundara nenisi koNDirda bandhuvE ahankAra prANa nindadhikane

caraNam 2

vanaja sambhavanu sraSTi srajipa gOsuga manadalli puTTise catura janara munigaNoLage
nI sanatkumAranAgi janisi yOga mArgadali salisida kAmA

caraNam 3

tArakAsuranenma bahu duruLatanadalli gAru mADutaliralu suragaNavanu
gaurI mahEshvarigE putranAgi puTTi dhAruNeyoLage skandaneniside

caraNam 4

rukmiNiyali janisi matsya udaradali pokku shishuvAgi satiyinda beLedu
rakkasi shambaranoDane kAdi geddu maraLi cakkane sAmbanesiside jAmbavatiyeli

caraNam 5

janapa dasharathanalli bharatanAgi puTTide manO avairAgya cakrAbhimAnI
enaglida vijayaviThalarEyananghri archane mADuva subrahmaNya balu dhanya
***