ಕಾಖಂಡಕಿ ಶ್ರೀ ಕೃಷ್ಣದಾಸರು
ಬಗಿಯಲಿ ಬ್ಯಾಡಣ್ಣಾ | ಮದದಲಿ ಪ
ಒಳ್ಳೆವರಾ ನುಡಿಯಳ್ಹಲಿ ಮಾಡಿ | ಖುಳ್ಳತನದಲೆ ದಿನ ಹೋಗಾಡಿ 1
ಮಾನವ ಸರಿ ಬಗಿಬ್ಯಾಡ | ಹವಣಿಸಿ ಚರಣಕ ನಮಿಸೆಲೋ ಮೂಢಾ 2
ಶಿಷ್ಟಗೆರಗನು ದಾವನು ಬಾಗಿ | ಹುಟ್ಟುವ ಕಾಡ ಬೊಬ್ಬುಲಿ ಮರವಾಗಿ 3
ಸಣ್ಣ ದೊಡ್ಡವರೆನಬಾರದು ಕೇಳು | ಮನ್ನಣೆ ಗೆಲ್ಲಗವರೇ ಮೇಲು 4
ಗುರುವರ ಮಹಿಪತಿ ಸಾರಿದ ನಿಜವಚನಾ | ಧರೆಯೊಳಗಿದೆ ಪರಗತಿ ಸೋಪಾನಾ 5
****