time 0.18
ಬಾರೆ ಭಾಗ್ಯದ ನಿಧಿಯೆ | ಬಾರೆ ಜಾನಕಿಯೆ ಪ
ಬಾರೆ ಬಾರೆ ಚಕೋರ ಸುಖಾಗ್ರಣೆ
ಸೇರಿದೆ ತವಪದ ವಾರಿಜ ನಿಲಯೆ ಅ.ಪ
ಕೃತಿ ಶಾಂತಿ ಜಯ ಮಾಯೆ
ಕ್ಷಿತಿಜಕೋಮಲ ಕಾಯೆ
ಶಿತಕಳೆವರ ವಿಧಿಶತಕ್ರತು ಸುಮನಸ
ತತಿನುತೆ ಪಾವನೆ ರತಿಪತಿ ತಾಯೆ 1
ಮಂಗಳೆ ಮುದ ಭರಿತೆ
ತಿಂಗಳ ಮುಖಿ ಸೀತೆ
ಇಂಗಡಲಜೆ ಕೃಪಾಂಗಿಯೆ ಎನ್ನಂತ
ರಂಗದಿ ಮಾನವ ಸಿಂಗನ ತೋರೆ 2
ಶಾಮಸುಂದರ ರಾಣಿ ವಾಮಾಕ್ಷಿ
ಕಾಲ್ಯಾಣಿ ಕಾಮಿನಿ ಮಣಿ
ಸತ್ಯಭಾಮೆ ರುಕ್ಮಿಣಿ ಗೋಮಿನಿ
ರಮೆ ಶುಭನಾಮ ಲಲಾಮೆ 3
***