..
ರಂಗ ಬಾರ ಬಾಲೆ ಕುರಂಗನಯನೆ ಕೇಳೆ ಪ
ಹೀಂಗಿರಲಾರೆ ಶ್ರೀಹರಿಯ ಸಂಗ ಬಿಟ್ಟಮೇಲೆಈ ತಂಗಾಳಿಯ ದಾಳೆ ಬೆಳದಿಂಗಳಿÀನ ಢಾಳೆಗಿಳಿ ಭೃಂಗನ ಸ್ವರಗಳೆ ದೇವಾಂಗನಾ ಗಾಯನಗಳೆಅನಂಗಗಿದು ಪೇಳೆಅ.ಪ.
ಅನ್ನ ಉದಕ ತೊರೆದೆ ನಾ ಚಿನ್ನದೊಸ್ತುವ ಮರೆದೆಮನ್ನಣಿಂದ ಉಡುವ ತೊಡುವ ಬಣ್ಣದೊಸನವ ಜರಿದೆಸಣ್ಣವಳ ಮಾಡಿ ಆ ರನ್ನೆಯಳ ಕೂಡಿಎನ್ನ ಮೇಲೆ ಕೋಪದಿಂದ ಭಿನ್ನ ನುಡಿಗಳನಾಡಿಕಣ್ಣ ತೆರೆದು ನೋಡಿ ಕಾಠಿಣ್ಯ ರೂಪವ ಮಾಡಿಮಣ್ಣ ಕೆದರೀಡ್ಯಾಡಿ ದÀುರುಳನ್ನ ಉದರವ ತೋಡಿಬಲಿಯನ್ನೆ ದಾನವ ಬೇಡಿ ತಾ, ತನ್ನೊಳು ಕಡಿದಾಡಿಅರಣ್ಯ ವಾಸವಮಾಡಿ ಪರ ಹೆಣ್ಣುಗಳನೆ ಕೂಡಿಬಲು ಬಣ್ಣಗೆಟ್ಟೋಡ್ಯಾಡಿ ಕಲಿಯನ್ನು ಸಂಹಾರಮಾಡಿ 1
ಯುಗಳಸ್ತನಗಳ ಮೇಲೆ ಒಳ್ಳೆ ಮುಗುಳು ಮಲ್ಲಿಗೆ ಮಾಲೆಬಗೆ ಬಗೆ ಅಲಂಕಾರದಿ ಸೊಗಸಿಲಿದ್ದ ವೇಳೆಖಗವಾಹನನು ಬಂದ ಎನ್ನ ಬಿಗಿದಪ್ಪುವೆನೆಂದನಗುತ ಮಾತನಾಡಳಿವಳು ಸುಗುಣೆಯಲ್ಲವೆಂದನಿಗಮ ಚೋರನ ಕೊಂದ ನಗವ ಬೆನ್ನಿಲಿ ತಂದಜಗವ ನೆಗಹುವೆನೆಂದ ಜಿಗಿದು ಕಂಭದಿ ಬಂದಮಗುವಿನಂದದಿ ನಿಂದ ಯಾತ್ರೆಗಳ ಮಾಡುವೆನೆಂದಅನ್ನಗಳ ಒಲ್ಲೆನೆಂದ ಬೆಣ್ಣೆಗಳ ಕದ್ದುತಿಂದನಗುತ ಬತ್ತಲೆನಿಂದ ತಾ ಸಿಗದೆ ಓಡುವೆನೆಂದ 2
ನಾರಿ ಈಗ ನಾನು ಮುರಾರಿಯ ಕಂಡೆನುವಾರಿಜಾಕ್ಷ ಬಾಯೆನ್ನಲು ಶಿರವ ಬಾಗಿದೆನೆಮಾರನಯ್ಯನು ಜಾಣೆ ಎನ್ನ ಮೋರೆಯ ನೋಡಿದನೆಜಾರನಾರಿ ಇವಳೆಂದು ಸೇರದೆ ಪೋದನೆನೀರೊಳಡಗಿದನೆ ಮೋರೆ ಮುಚ್ಚಿದನೆಕೋರೆ ತೋರಿದನೆ ಆ ಘೋರ ರೂಪಾದನೆಬ್ರಹ್ಮ-ಚಾರಿಯೆಂತೆಂದನೆ ಕ್ಷತ್ರಿಯರ ಸವರಿದನೆವಾರಿಧಿಯ ದಾಟಿದನೆ ಬಹುಜಾರನೆನಿಸಿದನೆನಾರೇರ ವ್ರತವಳಿದನೆ ಕುದುರೆ ಏರಿದ ಶ್ರೀಕೃಷ್ಣನೆ 3
***