..
Kruti by ಸಿರಿಗುರುತಂದೆವರದವಿಠಲರು sirigurutandevarada vittala
ಗಣೇಶ
ವಂದಿಸುವೆ ಕರದ್ವಂದ್ವ ಜೋಡಿಸಿ ಪ
ವಂದಿಸುವೆ ಒಂದೆ ಮನದಲಿ ನಂದಿವಾಹನ ಕಂದ ಗಣಪಗೆಬಂದ ಭಯಗಳ ಹಿಂದೆ ಮಾಡುತ ಸಿಂಧುಶಯನನ ತೋರಿಸೆಂದು ಅ.ಪ.
ಮೂಷಕವಾಹನನೆ ದೂಷಿತಮನವ ನಾಶಮಾಡೆಲೊ ಬೇಗಭಾಷ್ಯಕಾರನೆ ಭಾಷ್ಯಮಾಡಿಸು ತೋಷದಿಂದಲಿ ದಾಸನೆಂಬಭಿಲಾಷೆಗಳ ಪೂರ್ಯೆಸು ಅನುದಿನ ಪಾಶ ಅಂಕುಶದಾರನೇ 1
ಆಕಾಶಕಭಿಮಾನಿಯೇ ಎನ್ನಯ ವಾಕು ಲಾಲಿಸಬೇಕೊ ಪ್ರಭುವೇಕಾಕುಜನ ಸಹವಾಸದಿಂದಲಿ ನೂಕಿಸೆನ್ನನು ಏಕದಂತನೆಏಕಭಾವದಿ ಭಜಿಪ ಭಕುತರೋಳ್ಹಾತನೆನ್ನಗಜವದನನೆ ಬಾ ತೈಜ ವಿಶ್ವಭಾಜಕನೆ ತೋರೋ ಪಾದಭುಜ ಚತುಷ್ಟನೆ ತ್ರಿಜಗವಂದ್ಯನೆ ಭಜಿಪ ಭಕುತರ ಅಘವ ಕಳೆವನೆನಿಜೆ ಸುಜನರ ...ಭುಜಗ ಭೂಷಣ ಕಾಮನನುಜನೆ 2
ವಾರಿಬಂಧನ ಪೂರ್ವದಿ ಶ್ರೀ ರಾಮಚಂದ್ರನು ಪ್ರೀತಿಲಿ ಪೂಜಿಸಿದದುರುಳ ರಾವಣ ಮೆರೆದು ಕೆಟ್ಟನು ಧರೆಯಗೆದ್ದನುಜರಿದು ಚಂದ್ರನುವಿದ್ಯ ಪ್ರದಾಯಕನೆ ಮನ ತಿದ್ದು ಬೇಗನೆ ಬಿದ್ದು ಬೇಡುವೆ ಸಾಧುವಂದ್ಯನೆಮಧ್ವ ಮತದೊಳು ಶ್ರದ್ಧೆ ಪುಟ್ಟಿಸೊ ಮಧ್ವವಲ್ಲಭತಂದೆ ವರದ ವಿಠಲ ಪ್ರಿಯ ಸಿದ್ಧಿದಾಯಕ
***