ರಾಗ ನಾದನಾಮಕ್ರಿಯ. ಛಾಪು ತಾಳ
ಏನಾದರು ಒಂದಾಗಲಿ ||ಪ||
ನೂರೆಂಟು ದೇವರು ಮೊರ ತುಂಬ ಕಲ್ಲೆ ||ಅ||
ಮನೆಯ ಗಂಡ ಮಾಯವಾಗಲಿ
ಉಣ ಬಂದ ಮೈದುನ ಒರಗಲಿ
ಘನ ಅತ್ತಿಗೆ ನಾದಿನಿ ಸಾಯಲಿ
ನೆರೆ ಮನೆ ಹಾಳಾಗಿ ಹೋಗಲೊ ಹರಿಯೆ ||
ಅತ್ತೆಯ ಕಣ್ಣೆರಡು ಇಂಗಲಿ
ಮಾವನ ಕಾಲೆರಡು ಮುರಿಯಲಿ
ಹಿತ್ತಲ ಗೋಡೆಯು ಬೀಳಲಿ
ಕಾಡ ಕತ್ತಲೆಯಾದರು ಕವಿಯಲೊ ಹರಿಯೆ ||
ಕಂದನ ಕಣ್ಣೆರಡು ಮುಚ್ಚಲಿ
ಚಂದವಾದ ಹಾವು ಕಚ್ಚಲಿ
ದ್ವಂದಾರ್ಥಗಳೆಲ್ಲ ಬಿಚ್ಚಲಿ ಪು-
ರಂದರವಿಠಲನು ಮೆಚ್ಚಲೊ ಹರಿಯೆ
***
ಏನಾದರು ಒಂದಾಗಲಿ ||ಪ||
ನೂರೆಂಟು ದೇವರು ಮೊರ ತುಂಬ ಕಲ್ಲೆ ||ಅ||
ಮನೆಯ ಗಂಡ ಮಾಯವಾಗಲಿ
ಉಣ ಬಂದ ಮೈದುನ ಒರಗಲಿ
ಘನ ಅತ್ತಿಗೆ ನಾದಿನಿ ಸಾಯಲಿ
ನೆರೆ ಮನೆ ಹಾಳಾಗಿ ಹೋಗಲೊ ಹರಿಯೆ ||
ಅತ್ತೆಯ ಕಣ್ಣೆರಡು ಇಂಗಲಿ
ಮಾವನ ಕಾಲೆರಡು ಮುರಿಯಲಿ
ಹಿತ್ತಲ ಗೋಡೆಯು ಬೀಳಲಿ
ಕಾಡ ಕತ್ತಲೆಯಾದರು ಕವಿಯಲೊ ಹರಿಯೆ ||
ಕಂದನ ಕಣ್ಣೆರಡು ಮುಚ್ಚಲಿ
ಚಂದವಾದ ಹಾವು ಕಚ್ಚಲಿ
ದ್ವಂದಾರ್ಥಗಳೆಲ್ಲ ಬಿಚ್ಚಲಿ ಪು-
ರಂದರವಿಠಲನು ಮೆಚ್ಚಲೊ ಹರಿಯೆ
***
pallavi
EnAdaru ondAgali
anupallavi
nUreNDu dEvaru mora tumba kalle
caraNam 1
maneya gaNDa mAyavAgali uNa banda maiduna oragali
ghana attige nAdini sAyali nere mane hALAgi hOgalo hariye
caraNam 2
atteya kaNNeraDu ingaLi mAvana kAleraDu muriyali
hittala koDeyau bILasi kADa kattaleyAdaru kaviyalo hariye
caraNam 3
kandana kaNNeraDu muccali candavAda hAvu kaccali
dvanda vArtagaLella biccali purandara viTTalanu meccalo hariye
***