Showing posts with label ಶ್ರೀಗುರು ಪದಕೆ ಬಿಡದೆ ರಾಗದಿ ನಮಿಪೆ sirigovinda vittala. Show all posts
Showing posts with label ಶ್ರೀಗುರು ಪದಕೆ ಬಿಡದೆ ರಾಗದಿ ನಮಿಪೆ sirigovinda vittala. Show all posts

Monday, 2 August 2021

ಶ್ರೀಗುರು ಪದಕೆ ಬಿಡದೆ ರಾಗದಿ ನಮಿಪೆ ankita sirigovinda vittala

ಶ್ರೀಗುರು ಪದಕೆ ಬಿಡದೆ ರಾಗದಿ ನಮಿಪೆ ಪ

ಜಾಗುಮಾಡದೆ ಜವದಿ ಭವದ ರೋಗಗಳ

ಕಳಿಯುವಂಥ ಅ.ಪ

ಮಾನವರೂಪಾ ಮಹಾಜ್ಞಾನ ಪಾಪಾ

ಕಾನನ ದಾವಾಗ್ನಿಎನಿಸಿ ದೀನಜನರ ಪೊರೆಯವಂಥ 1

ಮಂಗಳ ಚರಿತಾ ಪಾಂಡುರಂಗನ ದೂತ

ತಿಂಗಳ ಸಮ ಕಾಂತಿವಂತ

ಡಿಂಗರಿಗರ ಪೊರೆಯುವಂಥ 2

ನರಜಗಮಾವಾ ಲಕುಮಿಗೆ ವರನೆನಿಸುವಾ

ವರಶಿರಿ ಗೋವಿಂದ ವಿಠಲನ್ಹರುಷದಿಂದ ಸ್ಮರಿಸುತಿರುವ 3

****