..
kruti by shreeshapranesha vittala dasaru
ಶ್ರೀನಿವಾಸವಿಠಲರ ಹಾಡು
ಶ್ರೀಶ ಪ್ರಾಣೇಶ ದಾಸರಾಯರ |ಬ್ಯಾಸರದಲೆ ಕೊಂಡಾಡೆಲೋ |ಏಸು ಜನ್ಮದ ದೋಷರಾಶಿಯು |ಲೇಶಿತಿಲ್ಲದೆ ಕಳೆವರು ಪ
ಉದಯ ಕಾಲಸ್ತಮಯ ಪರಿಯಲಿ |ಹೃದಯದೊಳು ಹರಿಯ ಮೂರ್ತಿಯಾ |ಮುದದಿ ಸ್ಮರಿಸುತ ಪದುಮನಾಭನ |ಪದಗಳರ್ಚಿಪ ಗುರುಗಳಾ 1
ನಾನು ನನ್ನದು ಎಂಬ ದುರ್ಮತಿ |ಹೀನ ಜನರನು ಸೇರದೆ ||ಜ್ಞಾನಿಗಳವೊಡಗೂಡಿ ಹರಿಕಥೆ |ಸಾನುರಾಗದಿ ಪೇಳುವಾ 2
ಅದ್ವೈತರುಸರಾಡದಂದದಿ |ಶುದ್ಧ ಗ್ರಂಥವ ಪಠಿಸುವಾ ||ಅಧ್ವರತಿ ಶ್ರೀನಿವಾಸ ವಿಠಲನ ಪರ |ಪದ್ಮಾರಾಧಕರಿವರೆಲಾ 3
***