ದೇವಿ ಅಂಬುಜವಲ್ಲಿ ರಮಣನೆ ।
ಭೂವರಾಹ ದಯಾನಿಧೇ ॥
ಪವಮಾನನ ದಿವ್ಯ ಕರದಲಿ ।
ಸೇವೆ ಸಂತತ ಕೊಳ್ಳುವೆ ॥೧॥
ಅವನಿಯೊಳು ಶ್ರೀಮುಷ್ಣ ಕ್ಷೇತ್ರದಿ ।
ನೀ ವಿಹಾರವ ಮಾಡುವೆ ॥
ಭವವಿಮೋಚನ ಭಕ್ತವತ್ಸಲ ।
ಕವಿಗಳಿಗೆ ಕರುಣಾಕರ ॥೨॥
ಅತ್ಯಗಾಧ ಸುಶೀಲ ಜಾಹ್ನವಿ ।
ಸುತ್ತು ಷೋಡಶ ತೀರ್ಥದಿ ॥
ನಿತ್ಯ ಪುಷ್ಕರಿಣಿಯ ಗರ್ಭದಿ ।
ನಿತ್ಯ ಇರುವುದು ಕಂಡೆ ನಾ ॥೩॥
ಮತ್ತು ವರ್ಣಿಪೆ ತೀರ್ಥ ತಟದಲಿ ।
ಉತ್ತಮಾಗ್ನೇಯ ಭಾಗದಿ ॥
ಚಿತ್ತವೇದ್ಯದಿ ಕಲ್ಪತರು ಅ ।
ಶ್ವತ್ಥ ರೂಪದಿ ಇರುವನ ॥೪॥
ಕರಗಳೆರಡನು ಕಟಿಯಲಿಟ್ಟು ।
ಕೋರೆಹಲ್ಲನೆ ತೋರುತ ॥
ಧರಿಸಿ ಚಿನ್ಮಯ ಸಾಲಿಗ್ರಾಮದ ।
ಸರವು ಈ ಪರಿ ಬೆಳಗುತ ॥೫॥
ಘನ್ನ ಶ್ವೇತವರಾಹ ಮೂರುತಿ ।
ಎನ್ನ ಪೂರ್ವದ ಪುಣ್ಯದಿ ॥
ನಿನ್ನ ಶುಭಕರ ಪಾದ ಪಂಕಜ ।
ವನ್ನು ಕಂಡೆನು ಇಂದು ನಾ ॥೬॥
ಸುಂದರಾನನ ಕಂಜ ಮಧುಪನ ।
ಇಂದು ನೋಡಿದ ಕಾರಣ ॥
ಬಂದ ದುರಿತಗಳೆಲ್ಲ ಪೋದವು ।
ಚಂದ ಶುಭಕರವಾದವು ॥೭॥
ಮಲ್ಲಮರ್ದನ ವೈಕುಂಠದಿಂದ ।
ಮೆಲ್ಲಮೆಲ್ಲನೆ ಬಂದೆಯಾ ॥
ಝಲ್ಲಿ ಕಾವಣದಲ್ಲಿ ಕುಳಿತು ।
ಎಲ್ಲ ಭಕ್ತರ ಸಲಹುವೆ ॥೮॥
ಸೂಕರಾಸ್ಯನೆ ನಿನ್ನ ಪಾದಕ ।
ನೇಕ ವಂದನೆ ಮಾಡುವೆ ॥
ಶೋಕಹರ ಗೋಪಾಲವಿಠಲ ।
ನೀ ಕರುಣಿಸಿ ರಕ್ಷಿಸೋ ॥೯॥
***
ಭೂವರಾಹ ದಯಾನಿಧೇ ॥
ಪವಮಾನನ ದಿವ್ಯ ಕರದಲಿ ।
ಸೇವೆ ಸಂತತ ಕೊಳ್ಳುವೆ ॥೧॥
ಅವನಿಯೊಳು ಶ್ರೀಮುಷ್ಣ ಕ್ಷೇತ್ರದಿ ।
ನೀ ವಿಹಾರವ ಮಾಡುವೆ ॥
ಭವವಿಮೋಚನ ಭಕ್ತವತ್ಸಲ ।
ಕವಿಗಳಿಗೆ ಕರುಣಾಕರ ॥೨॥
ಅತ್ಯಗಾಧ ಸುಶೀಲ ಜಾಹ್ನವಿ ।
ಸುತ್ತು ಷೋಡಶ ತೀರ್ಥದಿ ॥
ನಿತ್ಯ ಪುಷ್ಕರಿಣಿಯ ಗರ್ಭದಿ ।
ನಿತ್ಯ ಇರುವುದು ಕಂಡೆ ನಾ ॥೩॥
ಮತ್ತು ವರ್ಣಿಪೆ ತೀರ್ಥ ತಟದಲಿ ।
ಉತ್ತಮಾಗ್ನೇಯ ಭಾಗದಿ ॥
ಚಿತ್ತವೇದ್ಯದಿ ಕಲ್ಪತರು ಅ ।
ಶ್ವತ್ಥ ರೂಪದಿ ಇರುವನ ॥೪॥
ಕರಗಳೆರಡನು ಕಟಿಯಲಿಟ್ಟು ।
ಕೋರೆಹಲ್ಲನೆ ತೋರುತ ॥
ಧರಿಸಿ ಚಿನ್ಮಯ ಸಾಲಿಗ್ರಾಮದ ।
ಸರವು ಈ ಪರಿ ಬೆಳಗುತ ॥೫॥
ಘನ್ನ ಶ್ವೇತವರಾಹ ಮೂರುತಿ ।
ಎನ್ನ ಪೂರ್ವದ ಪುಣ್ಯದಿ ॥
ನಿನ್ನ ಶುಭಕರ ಪಾದ ಪಂಕಜ ।
ವನ್ನು ಕಂಡೆನು ಇಂದು ನಾ ॥೬॥
ಸುಂದರಾನನ ಕಂಜ ಮಧುಪನ ।
ಇಂದು ನೋಡಿದ ಕಾರಣ ॥
ಬಂದ ದುರಿತಗಳೆಲ್ಲ ಪೋದವು ।
ಚಂದ ಶುಭಕರವಾದವು ॥೭॥
ಮಲ್ಲಮರ್ದನ ವೈಕುಂಠದಿಂದ ।
ಮೆಲ್ಲಮೆಲ್ಲನೆ ಬಂದೆಯಾ ॥
ಝಲ್ಲಿ ಕಾವಣದಲ್ಲಿ ಕುಳಿತು ।
ಎಲ್ಲ ಭಕ್ತರ ಸಲಹುವೆ ॥೮॥
ಸೂಕರಾಸ್ಯನೆ ನಿನ್ನ ಪಾದಕ ।
ನೇಕ ವಂದನೆ ಮಾಡುವೆ ॥
ಶೋಕಹರ ಗೋಪಾಲವಿಠಲ ।
ನೀ ಕರುಣಿಸಿ ರಕ್ಷಿಸೋ ॥೯॥
***
Devi ambujavalli ramanane |
Buvaraha dayanidhe ||
Pavamanana divya karadali |
Seve santata kolluve ||1||
Avaniyolu srimushna kshetradi |
Ni viharava maduve ||
Bavavimocana Baktavatsala |
Kavigalige karunakara ||2||
Atyagadha susila jahnavi |
Suttu shodasa tirthadi ||
Nitya pushkariniya garbadi |
Nitya iruvudu kande na ||3||
Mattu varnipe tirtha tatadali |
Uttamagneya bagadi ||
Cittavedyadi kalpataru a |
Svattha rupadi iruvana ||4||
Karagaleradanu katiyalittu |
Korehallane toruta ||
Dharisi cinmaya saligramada |
Saravu I pari belaguta ||5||
Ganna svetavaraha muruti |
Enna purvada punyadi ||
Ninna subakara pada pankaja |
Vannu kandenu indu na ||6||
Sundaranana kanja madhupana |
Indu nodida karana ||
Banda duritagalella podavu |
Canda subakaravadavu ||7||
Mallamardana vaikunthadinda |
Mellamellane bandeya ||
Jalli kavanadalli kulitu |
Ella Baktara salahuve ||8||
Sukarasyane ninna padaka |
Neka vandane maduve ||
Sokahara gopalavithala |
Ni karunisi rakshiso ||9||
***
pallavi
dEvi ambujavalli ramaNane bhUvarAha dayAnidhE
anupallavi
pavamAnana divya karadali sEvesantatagoLLuvi
caraNam 1
avaniyoLu shrImuSNa kSEtradi nI vihArava mADuvi
bhava vimOcana bhaktavatsala kavigaLige karuNAkara
caraNam 2
atyagaada sushIla jaahnavi suttu SODasha tIrthadi
nitya puSkaraNiya garbhadi nitya iruvudu kaNDe nA
caraNam 3
mattu varNipe tIrtha taTadali uttama agnEya bhAgadi
cittavEdyadi kalpataru ashvatta rUpadi iruvana
caraNam 4
karagaLeraDanu kaTiyaliTTu kOrehallane tOruta
dharisi cinmaya sAligrAmada saravu Ipari beLaguta
caraNam 5
ghanna shvEta varAha mUruti enna pUrvadi puNyadi
ninna shubhakara pAda pankajavannu kaNDenu indu nA
caraNam 6
sundarAnana kanja madhupana indu nODida kAraNa
banda duritagaLella hOdavu cenda shubhakaravAdavu
caraNam 7
mallamardana vaikuNThadinda mellamellane bandeya
jhallikAvanadalli kuLitu ella bhaktara salahuvi
caraNam 8
sUkarAsyane ninna pAdakanEka vandane maDuve
shOkahara gOpAlaviThala nI karuNisi rakSiso
***