Showing posts with label ಳಳ- RSS- ರಾಷ್ಟ್ರ ಭಕ್ತಿ ಅರಳುತಿಹುದು others RASHTRA BHAKTI ARALUTIHUDU rss. Show all posts
Showing posts with label ಳಳ- RSS- ರಾಷ್ಟ್ರ ಭಕ್ತಿ ಅರಳುತಿಹುದು others RASHTRA BHAKTI ARALUTIHUDU rss. Show all posts

Friday, 24 December 2021

ರಾಷ್ಟ್ರ ಭಕ್ತಿ ಅರಳುತಿಹುದು others RASHTRA BHAKTI ARALUTIHUDU rss

   


RSS song .

ರಾಷ್ಟ್ರಭಕ್ತಿ ಅರಳುತಿಹುದು ಸ್ವಾಭಿಮಾನ ಕೆರಳುತಿಹುದು

ಶತ್ರುಗಳೇ ಮೇರೆ ಮೀರಿ ಬಂದರೆಚ್ಚರ!

ನೀಡುವೆವು ಶತಕಗಳ ಸೋಲಿಗುತ್ತರ ||ಪ||


ಒಡೆವ ನೀತಿ ಬಡಿವ ಭೀತಿಗೆಂದೂ ತಲೆಯ ಬಾಗೆವು

ತಡೆದು ಅರಿಯ ಪಡೆಯ ಹೆಡೆಯ ಮೆಟ್ಟಿ ಮುಂದೆ ಸಾಗ್ವೆವು

ನಡೆಯು ನಮದು ನೇರ, ನುಡಿಯು ಗಂಭೀರ ||೧||


ನಮ್ಮ ಗಡಿಯು ಕಡಲ ತಡೆಯ ಗುಡಿಯ ನುಡಿಯ ರಕ್ಷಣೆ

ಅದುವೆ ನಮ್ಮ ಬಾಳಗುರಿಯು ಇಲ್ಲ ಪರಾಕರ್ಷಣೆ

ಹಿಂದು ಪರಮ ವೀರ ಅವನ ಬಲ ಅಪಾರ ||೨||


ಶುದ್ಧಹೃದಯ ಸ್ನೇಹವೆಮದು ಮುಗ್ಧನಾದ ಗೆಳೆಯಗೆ

ಸಿದ್ಧರಿಹೆವು ಯುದ್ಧಗಳಿಗೆ ಬದ್ಧರಯ್ಯ ಗೆಲುವಿಗೆ

ಕಾದಿ ರಣದಿ ಘೋರ, ಹರಿಸಿ ರಕ್ತಧಾರ ||೩||


ಪಂಚನದಿಯ ಪುಣ್ಯತಟದಿ ಹೂಡಿ ಕುಟಿಲ ಸಂಚನು

ಒಡೆದು ನಾಡಿನೈಕ್ಯಮತ್ಯ ಹಾಕುತಿಹರು ಹೊಂಚನು

ಖೂಳರಿಪು ಸಂಹಾರ, ಗೈಯಲಿಂದು ಬಾರ ||೪||

***

rAShTraBakti araLutihudu svABimAna keraLutihudu

SatrugaLE mEre mIri baMdareccara!

nIDuvevu SatakagaLa sOliguttara ||pa||


oDeva nIti baDiva BItigeMdU taleya bAgevu

taDedu ariya paDeya heDeya meTTi muMde sAgvevu

naDeyu namadu nEra, nuDiyu gaMBIra ||1||


namma gaDiyu kaDala taDeya guDiya nuDiya rakShaNe

aduve namma bALaguriyu illa parAkarShaNe

hiMdu parama vIra avana bala apAra ||2||


SuddhahRudaya snEhavemadu mugdhanAda geLeyage

siddharihevu yuddhagaLige baddharayya geluvige

kAdi raNadi GOra, harisi raktadhAra ||3||


paMcanadiya puNyataTadi hUDi kuTila saMcanu

oDedu nADinaikyamatya hAkutiharu hoMcanu

KULaripu saMhAra, gaiyaliMdu bAra ||4||

***