ದೇವರ ದೇವನೆ ಕಾಯೊ ದೇವಕಿನಂದನೆ ಕಾಯೊ
ಜೀವರಾಸಿಗಳಿಗೆ ಸಂಜೀವನ ದೇವನೆ ಕಾಯೊ ಪ .
ಮಕರಿ ಕೈಗೆಸಿಕ್ಕಿ ಮಾನಭಂಗಗೊಂಡ ದೀನಪ್ರಕೃತಿ ಬಂಧನದಿಂದ ಪಾಡು ಬಡುತ್ತಿದ್ದೆನಯ್ಯ 1
ಕಾಮವೆಂಬ ಕಡುವೈರಿ ಕಂಡಕಂಡಕಡೆಗೆನ್ನಸೀಮೆಯೊಳು ಸುಳಿವಂತೆ ಶ್ರೀಧರ ಮಾಡಿದ ನೋಡು 2
ಶ್ರೀ ಹಯವದನ ನೀನು ಶ್ರಿತಜನ ಕಾಮಧೇನುಮಹಂತನೆಂಬುದ ಕೇಳಿ ಮೆಚ್ಚಿಬಂದೆನಯ್ಯ ನಿನ್ನ 3
***