Showing posts with label ಏನೋ ರಂಗ ನಿನ್ನ ವನಿತೆಯೊಳ prasannavenkata. Show all posts
Showing posts with label ಏನೋ ರಂಗ ನಿನ್ನ ವನಿತೆಯೊಳ prasannavenkata. Show all posts

Sunday, 10 November 2019

ಏನೋ ರಂಗ ನಿನ್ನ ವನಿತೆಯೊಳ ankita prasannavenkata

by ಪ್ರಸನ್ನವೆಂಕಟದಾಸರು
ಏನೊ ರಂಗ ನಿನ್ನ ವನಿತೆಯೊಳಪರಾಧಧ್ಯಾನಿಸಲು ದೊರಕೊಂಬುದೆನೀನಗಲಬೇಡ ತರಳೆಗಭಯವ ಕೊಟ್ಟುಮೌನದಲಿ ನಡೆಯೊ ಮನೆಗೆ ಬೇಗ ಪ.

ಸ್ಮರನ ದಾಳಿಗೆ ಕಂದಿ ಕುಂದಿ ಬಳ್ಕಡಿಯಿಡುತವಿರಹಾಗ್ನಿಗನ್ನತೊರೆದು ಸ್ಮರಿಸುವಳುನಿರುತ ನಿನ್ನಯ ಗುಣಾವಳಿಗಳನುಕರಿಸೋತರಳೆಯ ಕೂಡೊ ಕೋಪ ಬೇಡೊ ನೋಡೊ 1

ಪರಮಪುರುಷ ನೀ ಅವಳ ಜರಿದ ಕಾರಣಸೋಮಕಿರಣ ವಿಷಸಮ ಝಳದಪರಿತೋರಿ ಬಳಲುವಳು ಸಖಿಭೃಂಗ ಕಳಕಕೆತರಳೆ ಕೂಡೊ ಕೋಪ ಬೇಡೊ ನೋಡೊ 2

ನಲ್ಲ ನಿನ್ನ ಸಂಗ ಬಯಕೆಗೆ ಕಣ್ಣ ತೇಲಿಸುವಳಲ್ಲೊ ತೊದಲ್ಲು ನುಡಿವಳಲ್ಲೊಮೆಲ್ಲನೆದೆ ನೋಡಿ ಸುಯಿಗರೆವಳು ಖಗಾಂಕಜನಬಿಲ್ಲಿಗೆಬಲಿಕೊಡಲಿ ಬಾರೊ ತೋರೊ3

ಪಯನಿಧಿ ಒಡೆಯನ್ಯಾಕೆ ಬಾರನೆಂದವಳು ತನ್ನಯ ಸುದತಿಯರ ಬೈವಳುನಯನಧsರವಿರಸಿ ಕಂಬನಿದುಂಬುವಳು ಗಡಪ್ರಿಯಳರಸೆಜಾರವಿರಸಹರಿಸೊ4

ನಿನ್ನ ನಂಬಿದಳಿಗಿಂತಾಗುತಿರೆ ಸುಮ್ಮನಿಹೆಎನ್ನ ಹೇಯ ಬಾರದೆನಲುಉನ್ನತ ಹಯವನೇರಿ ಬಂದವಳ ನೆರೆದ ಪ್ರಸನ್ನ ವೆಂಕಟನಾಯಕರಸಿಕ5
********